ರಶ್ಯದ ಕೊರೋನ ಲಸಿಕೆಯ ಉತ್ಪಾದನೆ ಆರಂಭ

ಮಾಸ್ಕೊ,ಆ.15: ತಾನು ಸಂಶೋಧಿಸಿರುವ ಕೊರೋನ ವೈರಸ್ ಲಸಿಕೆಯ ಮೊದಲ ಬ್ಯಾಚ್ ಅನ್ನು ಉತ್ಪಾದಿಸಿರುವುದಾಗಿ ರಶ್ಯ ಶನಿವಾರ ಘೋಷಿಸಿದೆ. ‘‘ಗಾಮೆಲಿಯಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ನೊವೆಲ್ ಕೊರೋನ ವೈರಸ್ ಲಸಿಕೆಯ ಮೊದಲ ಬ್ಯಾಚ್ ಅನ್ನು ಉತ್ಪಾದಿಸಲಾಗಿದೆ ’’ ಎಂದು ರಶ್ಯದ ಆರೋಗ್ಯ ಸಚಿವಾಲಯ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಇನ್ನೂ ಪೂರ್ಣಗೊಂಡಿಲ್ಲ. 2 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ನಡೆಯಲಿರುವ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ ಈ ವಾರವಷ್ಟೇ ಆರಂಭಗೊಂಡಿದೆ.
Next Story





