ಐದು ತಿಂಗಳ ಬಳಿಕ ಇಂದು ವೈಷ್ಣೋದೇವಿ ಯಾತ್ರೆ ಪುನರಾರಂಭ
ದಿನಕ್ಕೆ 2,000 ಯಾತ್ರಿಕರಿಗೆ ಅವಕಾಶ

ಹೊಸದಿಲ್ಲಿ, ಆ.16: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿರುವ ವೈಷ್ಣೋದೇವಿ ಗುಹ ದೇಗುಲ ಸುಮಾರು ಐದು ತಿಂಗಳ ಬಳಿಕ ರವಿವಾರ ಯಾತ್ರಿಕರಿಗೆ ಮುಕ್ತವಾಗಿದೆ.
ಕೋವಿಡ್-19 ಕಾರಣಕ್ಕೆ ಮಾರ್ಚ್ 18ರಂದು ದೇಗುಲವನ್ನು ಮುಚ್ಚಲಾಗಿತ್ತು.
"ಮೊದಲ ವಾರ ಪ್ರತಿ ದಿನ 2,000 ಯಾತ್ರಿಕರಿಗೆ ದೇಗುಲ ಪ್ರವೇಶಿಸಲು ಅವಕಾಶ ನೀಡಲಾಗುವುದು. ಜಮ್ಮು-ಕಾಶ್ಮೀರದ 1,900 ಯಾತ್ರಿಕರು ಹಾಗೂ ಬೇರೆ ಸ್ಥಳಗಳಿಂದ ಬರುವ 100 ಯಾತ್ರಿಕರಿಗೆ ಅವಕಾಶ ನೀಡಲಾಗುವುದು. ಪರಿಸ್ಥಿತಿಯನ್ನು ಪರಾಮರ್ಶಿಸಲಾಗುವುದು. ಕ್ರಮಬದ್ಧವಾಗಿ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಶನಿವಾರ ತಿಳಿಸಿದ್ದಾರೆ.
Next Story





