ಉಳ್ಳಾಲ ಪೇಟೆ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

ಉಳ್ಳಾಲ : ರಹ್ಮಾನೀಯ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಸಿಯೇಶನ್ ಇದರ ಜಂಟಿ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಉಳ್ಳಾಲ ಪೇಟೆ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ 74ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿ " ಭಾರತ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹಲವಾರು ವರ್ಷ ದೀರ್ಘ ಹೋರಾಟದ ಸಮಯದಲ್ಲಿ ಜಾತಿಧರ್ಮ ಭೇದವಿಲ್ಲದೆ ಆ ಸಮಯದಲ್ಲಿ ಮುಂಚೂಣಿಯಲ್ಲಿ ಮುಸ್ಲಿಂ ನಾಯಕರು ಭಾಗವಹಿಸಿ ಪಡೆದಂತಹ ನಮ್ಮ ದೇಶದ ಸ್ವಾತಂತ್ರ್ಯ ಇವತ್ತು ನಾವೆಲ್ಲರೂ ಸ್ವಾತಂತ್ರ್ಯವಾಗಿ ಬದುಕಲು ಕಾರಣವಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಪೇಟೆ ಮಸೀದಿ ಅಧ್ಯಕ್ಷ ಯು.ಬಿ ಮೋಹಿದ್ದೀನ್ ಹಾಜಿ ಮಾತನಾಡಿ "ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಹಿರಿಯರು ಜಾತಿಭೇದವಿಲ್ಲದೆ ದೇಶಕ್ಕಾಗಿ ಒಗಟ್ಟಿನಲ್ಲಿ ಹೋರಾಡಿ ಇವತ್ತು ನಾವೆಲ್ಲರೂ ಸ್ವಾತಂತ್ರ್ಯ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಪೇಟೆ ಮಸೀದಿಯ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಖಾಜಂಜಿ ಯು ಬಿ ಇಸುಫ್ ,ಪೇಟೆ ಇಮಾಮ್ ಲತೀಫ್ ಮದನಿ, ಉಳ್ಳಾಲ ನಗರಸಭೆ ಮಾಜಿ ಸದಸ್ಯ ಪೋಡಿಮೋನು ಇಸ್ಮಾಯಿಲ್, ಫಾರೂಕ್, ಇಸ್ಮಾಯಿಲ್, ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಶಣ್ ಅಧ್ಯಕ್ಷ ತೌಸೀಫ್, ಉಪಾಧ್ಯಕ್ಷ ಬಾದ್ರುದ್ದೀನ್, ಕಾರ್ಯದರ್ಶಿ ಅಝೀಮ್, ಜೊತೆ ಕಾರ್ಯದರ್ಶಿ ಶರಾಫತ್, ಖಾಜಂಜಿ ಆಫ್ರಿದ್, ಸದಸ್ಯ ಝೈದ್ ಸಲೀಮ್, ಫಯಾಝ್, ಅಬ್ದುಲ್ ರಹ್ಮಾನ್, ಇರ್ಷಾದ್, ಸರ್ಫ್ರಾಝ್ ಮತ್ತು ಸಿನಾನ್ ಕೊಟ್ಟಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







