ಕಾಟಿಪಳ್ಳದಲ್ಲಿ ನೂತನ ಮಾಹಿತಿ, ಸೇವಾ ಕೇಂದ್ರ ಉದ್ಘಾಟನೆ
ಕಾಟಿಪಳ್ಳ: ನೂತನ ಮಾಹಿತಿ ಮತ್ತು ಸೇವಾ ಕೇಂದ್ರದ (ಐಇಸಿ) ಉದ್ಘಾಟಣೆಯು ಶನಿವಾರ ನಡೆಯಿತು.
ನೂತನ ಕಚೇರಿಯನ್ನು ಎಸ್ ಡಿ ಪಿ ಐ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲ ಜೋಕಟ್ಟೆ ಮತ್ತು ಅಸೈಯದ್ ಹಾಮಿದ್ ಇಸ್ಮಾಯಿಲ್ ಬುಖಾರಿ ತಂಙಳ್ ಜಂಟಿಯಾಗಿ ನಿರ್ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಕಾಟಿಪಳ್ಳ ವಲಯಾಧ್ಯಕ್ಷ ಶಮೀರ್ ಅಬ್ಬಾಸ್ ವಹಿಸಿದ್ದರು. ವೇದಿಕೆಯಲ್ಲಿ ನೌಷಾದ್ ಚೊಕ್ಕಬೆಟ್ಟು, ಶಂಶಾದ್ ಅಬೂಬಕ್ಕರ್ ಕಾರ್ಪೋರೇಟರ್, 5ನೇ ವಾರ್ಡ್ ಕಾಟಿಪಳ್ಳ, ಅಶ್ರಫ್ ಮಂಚಿ, ಬಿ.ಎಚ್.ಇದ್ದಿನಬ್ಬ ಮಾಜಿ ಖಜಾಂಜಿ ಮುಹಿಯದ್ದೀನ್ ಜುಮಾ ಮಸೀದಿ ಕಾಟಿಪಳ್ಳ, ಅಬ್ದುಲ್ ಖಾದರ್ ಕುಳಾಯಿ, ಅಯ್ಯೂಬ್ ಹಾಗು ಇತರರು ಉಪಸ್ಥಿತರಿದ್ದರು.
ಎಸ್ ಡಿ ಪಿ ಐ ಕಾಟಿಪಳ್ಳ ಬ್ರಾಂಚ್ ಉಪಾಧ್ಯಕ್ಷ ಶೇಕಬ್ಬ ಕಾರ್ಯಕ್ರಮ ನಿರೂಪಿಸಿದರು.
Next Story