ಶಂಕರಪುರ 'ವಿಶ್ವಾಸದ ಮನೆ'ಗೆ ಆಹಾರ ಸಾಮಗ್ರಿ ವಿತರಣೆ

ಕಾಪು, ಆ.16: ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ವತಿಯಿಂದ ಶಂಕರಪುರ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ವೃದ್ಧಾಶ್ರಮಕ್ಕೆ 75ಸಾವಿರ ರೂ. ಮೊತ್ತದ ಆಹಾರ ದಿನಸಿ, ಬಟ್ಟೆ ಇನ್ನಿತರ ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಶನಿವಾರ ವಿತರಿಸಲಾಯಿತು.
ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೆ ಮಾತನಾಡಿದರು.
ಪಾದೂರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ, ಉದ್ಯಮಿ ರೂಪೇಶ್ ವಿ.ಕಲ್ಮಾಡಿ, ವೇದಿಕೆಯ ಸಂಚಾಲಕ ದಿವಾಕರ ಡಿ.ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷ ದಿವಾಕರ ಬಿ.ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರಾದ ರಾಜೇಶ್ ಕುಲಾಲ್, ಲಿಯೋ ಮೆಂಡೋನ್ಸ, ಕಳತ್ತೂರ್ ಸ್ಟಾನ್ಲಿಸನ್ ಕೊರ್ಡ, ಗೌರವ ಸಲಹೆಗಾರ ದಯಾನಂದ ಶೆಟ್ಟಿ ದೆಂದೂರು, ಕಾರ್ಯದರ್ಶಿ ಲೋಕೇಶ್ ಭಟ್, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಮೊಹಮ್ಮದ್, ಮಾರಿಯೋ ಬರ್ಬೊಜಾ ಮುದರಂಗಡಿ, ಕಾಸಿಂ ಬಜ್ಪೆ, ಮೊಹಮ್ಮದ್ ಫಾಯಿಕ್ ಚಂದ್ರನಗರ, ಹರೀಶ್ ಶೆಟ್ಟಿ ಬೆಳ್ಳೆ, ಫಯಾಜ್ ಹಾಜಿ ಮಜೂರು, ಬಿ.ಎ.ಫಕ್ರುದ್ದೀನ್ ಆಲಿ, ತೆರೇಝ ಸಿಕ್ವೇರ, ಬಾಲಕೃಷ್ಣ ರಾವ್ ಕಳತ್ತೂರು, ಶರೋನ್ ಕುತ್ಯಾರು, ಪ್ರಶಾಂತ್ ಶಂಕರಪುರ ಉಪಸ್ಥಿತರಿದ್ದರು.
ವಿಶ್ವಾಸದಮನೆಯ ಸಂಸ್ಥಾಪಕ ಪಾಸ್ಟರ್ ಸುನೀಲ್ ಜಾನ್ ಡಿಸೋಜ ಸ್ವಾಗತಿಸಿದರು. ವ್ಯವಸ್ಥಾಪಕ ಬಾಬು ಮ್ಯಾಥ್ಯೂ ವಂದಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.





