54 ಬಡಕುಟುಂಬಗಳಿಗೆ ಬೋರ್‌ವೆಲ್ ನಿರ್ಮಿಸಿ, ಪಂಪುಸೆಟ್ ವಿತರಣೆ

ಮಲ್ಪೆ, ಆ.16: ಮಲ್ಪೆಉದ್ದಿನಹಿತ್ಲುವಿನ ಸಮಾಜಸೇವಕ ನಕ್ವಿ ರಹಮತುಲ್ಲಾ ಕರಾವಳಿಯ ಹಲವು ಕಡೆಗಳಲ್ಲಿ ಸುಮಾರು 54 ಬಡ ಕುಟುಂಬಗಳಿಗೆ ಬೋರ್ ವೆಲ್ ನಿರ್ಮಿಸಿ, ಪಂಪುಸೆಟ್ ಮತ್ತು ರೇಶನ್ ಕಿಟ್‌ಗಳನ್ನು ವಿತರಿಸಿದರು.
ಶನಿವಾರ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಧರ್ಮ ಜಾತಿಯ ಹೆಸರಲ್ಲಿ ಈ ದೇಶದ ಮನುಷ್ಯರ ನಡುವೆ ಅಂತರದ ಕಂದಕಗಳನ್ನು ಸೃಷ್ಠಿಸುವ ಈ ಕಾಲಘಟ್ಟದಲ್ಲಿ ಜಾತಿ, ಧರ್ಮ ನೋಡದೆ ಬಡವರ ಬದುಕಿಗಾಗಿ ದಾನ ಮಾಡುವವರೇ ನಿಜವಾದ ದೇವರು ಎಂದು ಹೇಳಿದರು.
ಈ ನಾಡಿನ ಹಲವು ಕುಟುಂಬಗಳಲ್ಲಿ ಬೆಳಕು ಮೂಡಿಸಿದ ರಹಮತುಲ್ಲಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಸುಮಾರು 15ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಬಡವರ ಮನೆ ಬಾಗಿಲಿನಲ್ಲಿ ಬೋರ್‌ವೆಲ್ ರ್ನಿುಸಿ ಸದಾ ಕುಡಿುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಇವರು, ರಾಜಕಾರಣಿಗಳಿಗೆ, ಸಂಘಟನೆಗಳಿಗೆ ಜಗತ್‌ಗುರುಗಳಿಗೆ, ನಾಯಕ ಎನಿಸಿಕೊಳ್ಳವವರಿಗೆ ಬಡವರ ಸಮೃದ್ಧಿ ಮತ್ತು ಸಮಾನತೆಯಲ್ಲಿ ನಮ್ಮ ಪ್ರಗತಿ ಅಡಗಿದೆ ಎಂಬುದನು್ನ ತೋರಿಸಿಕೊಟ್ಟಿದ್ದಾರೆ ಎಂದರು.
ವೇದಿಕೆಯಲ್ಲಿ ನಾಟಿವೈದ್ಯ ಹಾಗೂ ಸಮಾಜಸೇವಕ ಪುಟ್ಟಣಯ್ಯ ತೊಟ್ಟಂ, ಆನಂದ ಸಾಲ್ಯಾನ್, ಸರ್ಫರಾಜ್, ಉದ್ಯಮಿ ಭಾಸ್ಕರ್, ಮಾಧವ, ಗುರು ರಾಜ್ ಮೊದಲಾದವರು ಉಪಸ್ಥಿತರಿದ್ದರು. ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಭಗವಾನ್ ನೆರ್ಗಿ ವಂದಿಸಿದರು.







