‘ಕಾನೂನು-ಮಹಿಳೆ’ ಕೃತಿ ‘ಫೇಸ್‌ಬುಕ್ ಲೈವ್’ನಲ್ಲಿ ಬಿಡುಗಡೆ

ಮಂಗಳೂರು, ಆ.16: ಅಂಕಿತ ಪುಸ್ತಕ ಪ್ರಕಟಿಸಿರುವ ಹಿರಿಯ ಸಾಹಿತಿ ಸಿ.ಎನ್. ರಾಮಚಂದ್ರರಾವ್ ಅವರ ‘ಕಾನೂನು ಮತ್ತು ಮಹಿಳೆ’ ಕೃತಿ ಬಿಡುಗಡೆ ಕಾರ್ಯಕ್ರಮವು ‘ಬುಕ್ ಬ್ರಹ್ಮ’ ‘ಫೇಸ್‌ಬುಕ್ ಲೈವ್’ನಲ್ಲಿ ರವಿವಾರ ನಡೆಯಿತು.
ಪುಸ್ತಕದ ಕುರಿತು ಮಾತನಾಡಿದ ಸ್ತ್ರೀವಾದಿ ಚಿಂತಕಿ, ನ್ಯಾಯವಾದಿ ಹೇಮಲತಾ ಮಹಿಷಿ, ಭಾರತೀಯ ಪ್ರಜೆಗಳೆಲ್ಲರೂ ಕಾನೂನುಗಳ ಬಗ್ಗೆ ತಿಳಿದಿರಲೇಬೇಕು. ಮಹಿಳಾ ಕಾನೂನುಗಳ ಕುರಿತು ಈ ಕೃತಿಯು ಸಮಗ್ರ ಮಾಹಿತಿ ನೀಡಿದೆ ಎಂದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಎಲ್ಲರೂ ಸಮಾನರು. ಪುರುಷ ರೂಪಿಸಿದ ಕಾನೂನಿ ನಲ್ಲಿಯೂ ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ನೋಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಅಪರಾಧಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ತೀರಾ ಕಡಿಮೆ. ಕಾನೂನುಗಳು ಬಲಿಷ್ಠಗೊಳ್ಳಬೇಕು. ಇದು ಎಲ್ಲರಿಗೂ ಮಹಿಳಾ ಕಾನೂನುಗಳ ಕುರಿತು ಅರಿವು ಮೂಡಿಸುವಂತ ಕೃತಿಯಾಗಿದೆ ಎಂದರು.
ಹಿರಿಯ ಸಾಹಿತಿ ಸಿ.ಎನ್. ರಾಮಚಂದ್ರರಾವ್ ಅವರು ಮಥುರಾ, ಬನ್ವಾರಿದೇವಿ ಪ್ರಕರಣಗಳನ್ನು ಉದಾಹರಣೆ ನೀಡಿ ಮಹಿಳಾ ಕಾನೂನುಗಳ ವೈಫಲ್ಯವನ್ನು ವಿವರಿಸಿದರು.
ಲೇಖಕ ವಸುಧೇಂದ್ರ ಅವರು ಹೇಮಲತಾ ಮಹಿಷಿ, ಸಿ.ಎನ್. ರಾಮಚಂದ್ರರಾವ್ ಹಾಗೂ ಪದ್ಮರಾಜ ದಂಡಾವತಿ ಅವರೊಂದಿಗೆ ಸಂವಾದ ನಡೆಸಿದರು.
ಲೈವ್ ವೀಡಿಯೊ ವೀಕ್ಷಿಸಲು ಈ ಲಿಂಕ್: https://bit.ly/3444jCZ ಕ್ಲಿಕ್ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.







