‘ಮೇಲ್ತೆನೆ’ಯ ಬ್ಯಾರಿ ಕಥೆ, ಕವನ, ಚುಟುಕು ಸ್ಪರ್ಧೆಗಳ ಫಲಿತಾಂಶ ಪ್ರಕಟ

ಮಂಗಳೂರು, ಆ.16: ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ ದೇರಳಕಟ್ಟೆ ಇದರ 5ನೆ ವಾರ್ಷಿಕದ ಅಂಗವಾಗಿ ಆಯೋಜಿಸಲಾದ ಬ್ಯಾರಿ ಕಥೆ, ಕವನ, ಚುಟುಕು ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿವೆ.
ಕಥೆ ಸ್ಪರ್ಧೆಯಲ್ಲಿ ರಮ್ಲತ್ ನಂದರಬೆಟ್ಟು (ಪ್ರಥಮ), ರಿಯಾಝ್ ಅಬ್ದುರ್ರಹ್ಮಾನ್ ಪಕ್ಕಲಡ್ಕ, (ದ್ವಿತೀಯ), ಸಲ್ಮಾ ಮಂಗಳೂರು (ತೃತೀಯ) ಬಹುಮಾನ ಪಡೆದಿದ್ದಾರೆ. ಕವನ ಸ್ಪರ್ಧೆಯಲ್ಲಿ ಉಮ್ಮುಲ್ ಕುಲ್ಸು ಪಕ್ಕಲಡ್ಕ (ಪ್ರಥಮ), ಅಫ್ಲಾಹ್ ಕಲಾಯಿ (ದ್ವಿತೀಯ), ಸಂಶು ಗಾಂಜಾಲ್ (ತೃತೀಯ) ಬಹುಮಾನ ಪಡೆದಿದ್ದಾರೆ. ಚುಟುಕು ಸ್ಪರ್ಧೆಯಲ್ಲಿ ಸಫನಾ ಕಾರ್ಕಳ (ಪ್ರಥಮ), ಸಲೀಂ ಬೋಳಂಗಡಿ (ದ್ವಿತೀಯ), ಸುವೈಬಾ ಕುದ್ರೋಳಿ (ತೃತೀಯ) ಬಹುಮಾನ ಪಡೆದಿದ್ದಾರೆ.
ತೀರ್ಪುಗಾರರಾಗಿ ಬಿಎ ಮುಹಮ್ಮದಲಿ ಕಮ್ಮರಡಿ, ಶಮೀಮಾ ಕುತ್ತಾರ್, ಆಯಿಶಾ ಯುಕೆ ಉಳ್ಳಾಲ ಸಹಕರಿಸಿದ್ದರು. ಬಹುಮಾನ ವಿತರಣೆ ಕಾರ್ಯಕ್ರಮವು ಸೆಪ್ಟಂಬರ್ ಎರಡನೆ ವಾರ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





