ಜೋಕಟ್ಟೆ: ಎಸೆಸೆಲ್ಸಿ ಸಾಧಕರಿಗೆ ಸನ್ಮಾನ

ಮಂಗಳೂರು, ಆ.16: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಜೋಕಟ್ಟೆ ಯುನಿಟ್ ವತಿಯಿಂದ ಸನ್ಮಾನಿಸಲಾಯಿತು.
ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಫರಾನ್ 570(ಶೇ.91) ಹಾಗೂ ಅಂಜುಮಾನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಫಾತಿಮಾ ಸುರಯ್ಯ 565 (ಶೇ.91.84) ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಿಎಫ್‌ಐ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಅಶ್ರಫ್, ಜೋಕಟ್ಟೆ ಏರಿಯಾ ಅಧ್ಯಕ್ಷ ಝಿಯಾದ್, ಜೋಕಟ್ಟೆ ಗ್ರಾಪಂ ಮಾಜಿ ಸದಸ್ಯ ಪರ್ವೀಝ್ ಅಲಿ ಜೋಕಟ್ಟೆ ಉಪಸ್ಥಿತರಿದ್ದರು. ನೌಫಲ್ ಜೋಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





