ದೇಶದ ಎಲ್ಲಾ ನಾಗರಿಕರಿಗೆ ಏಕರೂಪದ ವಿಚ್ಛೇದನ ಕಾನೂನು: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಜೆಪಿ ನಾಯಕ

ಹೊಸದಿಲ್ಲಿ: ದೇಶಾದ್ಯಂತ ಎಲ್ಲಾ ನಾಗರಿಕರಿಗೂ ಅನ್ವಯಿಸುವಂತಹ ಏಕರೂಪದ ವಿಚ್ಛೇದನ ಕಾನೂನನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ವಿಚ್ಛೇದನ ಕಾನೂನುಗಳಲ್ಲಿರುವ ವಿವಿಧತೆಗಳನ್ನು ತೆಗೆದು ಹಾಕಿ, ಧರ್ಮ, ಜಾತಿ, ವರ್ಗ, ಲಿಂಗ ಅಥವಾ ಜನ್ಮಸ್ಥಳದ ಪೂರ್ವಾಗ್ರಹಗಳಿಲ್ಲದೆ ಏಕರೂಪದ ವಿಚ್ಛೇದನ ಕಾನೂನನ್ನು ಜಾರಿಗೊಳಿಸಲು ಕೇಂದ್ರಕ್ಕೆ ನಿರ್ದೇಶ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಚ್ಛೇದನ ನಿಯಮಗಳನ್ನು ಪರಿಶೀಲಿಸಲು ಮತ್ತು ಏಕರೂಪದ ವಿಚ್ಛೇದನವನ್ನು ಪರಿಗಣಿಸಲು ನ್ಯಾಯಾಲಯವು ಕಾನೂನು ಆಯೋಗಕ್ಕೆ ನಿರ್ದೇಶ ನೀಡಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Next Story





