ಯುಎಇ- ಇಸ್ರೇಲ್ ದೂರವಾಣಿ ಸೇವೆ ಆರಂಭ?
ದುಬೈ, ಆ.16: ಯುಎಇ ಹಾಗೂ ಇಸ್ರೇಲ್ ತಮ್ಮ ರಾಜತಾಂತ್ರಿಕ ಬಾಂಧವ್ಯಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ, ರವಿವಾರ ನಡುವೆ ದೂರವಾಣಿ ಸೇವೆ ರವಿವಾರ ಆರಂಭಗೊಂಡಿರುವುದಾಗಿ ಅಸೋಸಿಯೆಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಜೆರುಸಲೇಂ ಹಾಗೂ ದುಬೈನಲ್ಲಿರುವ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಅಸೋಸಿಯೆಟೆಡ್ ಪ್ರೆಸ್ನ ಪತ್ರಕರ್ತರು ಇಂದು ಸ್ಥಿರದೂರವಾಣಿ ಹಾಗೂ ಮೊಬೈಲ್ ಫೋನ್ಗಳ ಮೂಲಕ ಪರಸ್ಪರ ಸಂಭಾಷಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಆದಾಗ್ಯೂ ಉಭಯದೇಶಗಳ ನಡುವೆ ದೂರಸಂಪರ್ಕ ಸೇವೆ ಆರಂಭಗೊಂಡಿದೆ ಎಂಬುದನ್ನು ಇಸ್ರೇಲ್ ಹಾಗೂ ಯುಎಇನ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
Next Story