ಎಸೆಸೆಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸರಕಾರಿ ಶಾಲಾ ವಿದ್ಯಾರ್ಥಿನಿಗೆ ಸನ್ಮಾನ
ಉಡುಪಿ, ಆ.17: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಳಕಾಡು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಭವ್ಯ ನಾಯ್ಕ್ ಅವರನ್ನು ಇಂದು ಸನ್ಮಾನಿಸಲಾಯಿತು.
622 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಗೋಪಾಲಪುರ ವಾರ್ಡಿನ ನಿವಾಸಿ ನಾರಾಯಣ ನಾಯ್ಕ್ ಮತ್ತು ಉಮಾ ನಾಯ್ಕ್ ಮಗಳಾದ ಭವ್ಯ ಅವರನ್ನು ಅವರ ಮನೆಯಲ್ಲಿಯೇ ಶಾಸಕ ಕೆ.ರಘುಪತಿ ಭಟ್ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಮಂಜುಳಾ ನಾಯಕ್, ಬೂತ್ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ರಾಜು ಮಾಸ್ಟರ್, ಪಕ್ಷದ ಹಿರಿಯ ದಿನೇಶ್ ಪೆ ಮೊದಲಾದವರು ಉಪಸ್ಥಿತರಿದ್ದರು
Next Story