ಮದ್ಯದ ಅಮಲಿನಲ್ಲಿ ಜಗಳ: ಮಾರಕಾಸ್ತ್ರಗಳಿಂದ ಹೊಡೆದು ಪತ್ನಿಯ ಕೊಲೆ
![ಮದ್ಯದ ಅಮಲಿನಲ್ಲಿ ಜಗಳ: ಮಾರಕಾಸ್ತ್ರಗಳಿಂದ ಹೊಡೆದು ಪತ್ನಿಯ ಕೊಲೆ ಮದ್ಯದ ಅಮಲಿನಲ್ಲಿ ಜಗಳ: ಮಾರಕಾಸ್ತ್ರಗಳಿಂದ ಹೊಡೆದು ಪತ್ನಿಯ ಕೊಲೆ](https://www.varthabharati.in/sites/default/files/images/articles/2020/08/17/255417-1597682008.jpg)
ಬೆಂಗಳೂರು, ಆ.17: ಮದ್ಯದ ಅಮಲಿನಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಯಲಹಂಕದ ಅಳ್ಳಾಲಸಂದ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಳ್ಳಾಲಸಂದ್ರದ ನಂದಿನಿ (23) ಕೊಲೆಯಾದವರು ಎಂದು ತಿಳಿದುಬಂದಿದ್ದು, ಕೃತ್ಯವೆಸಗಿದ ಪತಿ ಜಾನ್ಸನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ಜಾನ್ಸನ್, ನಂದಿನಿಯನ್ನು 3 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ. ದಂಪತಿ ಅಳ್ಳಾಲಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ರವಿವಾರ ಮದ್ಯ ಸೇವಿಸಿ ಬಂದಿದ್ದ ಜಾನ್ಸನ್ ಕ್ಷುಲ್ಲಕ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಯಲಹಂಕ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಜಾನ್ಸನ್ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story