ಜಗತ್ತಿನಾದ್ಯಂತ ಅರಣ್ಯಗಳನ್ನು ಕಬಳಿಸುತ್ತಿರುವ ಕೀಟಗಳು
ವಾಶಿಂಗ್ಟನ್, ಆ. 17: ಗಾತ್ರದಲ್ಲಿ ಅಕ್ಕಿ ಕಾಳನ್ನು ಮೀರದ ಸಣ್ಣ ಮರ ಕೀಟಗಳು ಈಗಾಗಲೇ ಅಮೆರಿಕದ ಬ್ರಿಟಿಶ್ ಕೊಲಂಬಿಯದಲ್ಲಿ 15 ವರ್ಷಗಳಿಗೆ ಸಾಕಾಗುವಷ್ಟು ಮರಗಳನ್ನು ನಾಶಪಡಿಸಿದೆ. ಈ ಮರಗಳಿಂದ 90 ಲಕ್ಷ ಸಣ್ಣ ಕುಟುಂಬಗಳಿಗೆ ಬೇಕಾಗುವಷ್ಟು ಮನೆಗಳನ್ನು ನಿರ್ಮಿಸಬಹುದಾಗಿತ್ತು.
ಅದೂ ಅಲ್ಲದೆ, ಈ ಕೀಟಗಳು ಆಲ್ಬರ್ಟ ಮತ್ತು ಪೆಸಿಫಿಕ್ ವಾಯುವ್ಯದಲ್ಲಿನ ಮರಗಳನ್ನು ತಿನ್ನುತ್ತಾ ಸಾಗುತ್ತಿದೆ. ಅದೂ ಅಲ್ಲದೆ ಉತ್ತರ ಅಮೆರಿಕದಲ್ಲಿ ಇನ್ನೊಂದು ಜಾತಿಯ ಕೀಟವು ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮರಗಳನ್ನು ತಿನ್ನುವ ಬೆದರಿಕೆಯನ್ನು ಹುಟ್ಟಿಸಿದೆ. ಇನ್ನೊಂದು ಕಡೆ ಯುರೋಪ್‌ನ ಕೆಲವು ಭಾಗಗಳಲ್ಲಿ, ಇದೇ ಮಾದರಿಯ ಕೀಟಗಳು ಮರಗಳನ್ನು ನಾಶಪಡಿಸುತ್ತಾ ಮುನ್ನುಗ್ಗುತ್ತಿವೆ.
ಹವಾಮಾನ ಬದಲಾವಣೆ ಯಿಂದಾಗಿ ಚಳಿಗಾಲಗಳು ಬಿಸಿಯಾ ಗುತ್ತಿವೆ. ಚಳಿಗಾಲಗಳು ಸಾಮಾನ್ಯವಾಗಿ ಕೀಟಗಳನ್ನು ದೂರವಿಡುತ್ತಿದ್ದವು. ಆದರೆ, ಈಗ ಚಳಿಗಾಲಗಳ ತೀವ್ರತೆಯಲ್ಲಿ ಕುಸಿತ ಉಂಟಾಗಿರುವುದರಿಂದ ಕೀಟಗಳು ವಿಜೃಂಭಿಸುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ.
Next Story





