‘ಬೇರೆಯವರ ಹಣ ನನ್ನ ಖಾತೆಗೆ ಬಂದಿದೆ, ಅದು ನಿಮ್ಮದಾಗಿದ್ದರೆ ನನ್ನನ್ನು ಸಂಪರ್ಕಿಸಿ ಪಡೆದುಕೊಳ್ಳಿ !’
ಸುಳ್ಯದ ವ್ಯಾಪಾರಿ ಜಾಸಿರ್ ಅಹ್ಮದ್ ಮನವಿ
ಮಂಗಳೂರು, ಆ.18: ನಗರದ ಕ್ಯಾಶ್ ಡೆಪಾಸಿಟ್ ಯಂತ್ರವೊಂದರಿಂದ ತನ್ನ ಖಾತೆಗೆ ಅಪರಿಚಿತ ವ್ಯಕ್ತಿ ಸಾವಿರಾರು ರೂ. ಮೊತ್ತದ ಹಣ ತಪ್ಪಿ ಜಮೆ ಮಾಡಿದ್ದಾರೆ ಎಂದು ಸುಳ್ಯ ಮೂಲದ ವ್ಯಾಪಾರಿ ಜಾಸಿರ್ ಅಹ್ಮದ್ ತಿಳಿಸಿದ್ದಾರೆ.
“ಕ್ಯಾಶ್ ಡೆಪಾಸಿಟ್ ಯಂತ್ರವೊಂದರಿಂದ ನನ್ನ ಎಚ್ಡಿಎಫ್ಸಿ ಬ್ಯಾಂಕ್ ಖಾತೆಗೆ ಮಂಗಳವಾರ ಬೆಳಗ್ಗೆ ಒಂದು ಮೊತ್ತ ಜಮೆಯಾಗಿದೆ. ಈ ಹಣವನ್ನು ನನ್ನ ಖಾತೆಗೆ ಕ್ಯಾಶ್ ಡೆಪಾಸಿಟ್ ಯಂತ್ರದ ಮೂಲಕ ಜಮೆ ಮಾಡಿದವರು ಯಾರೂ ಎನ್ನುವುದು ತಿಳಿದಿಲ್ಲ. ಈ ಬಗ್ಗೆ ಸುಳ್ಯದ ಎಚ್ಡಿಎಫ್ಸಿ ಶಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದು, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಪರಿಚಿತರು ಆಕಸ್ಮಿಕವಾಗಿ ನನ್ನ ಖಾತೆಗೆ ಹಣ ಜಮೆ ಮಾಡಿರುವ ಸಾಧ್ಯತೆ ಇದೆ. ಅಂತಹವರು ನನ್ನನ್ನು ( ಮೊಬೈಲ್ 9482966561) ಕೂಡಲೇ ಸಂಪರ್ಕಿಸಿ , ತಾವು ಜಮೆ ಮಾಡಿರುವ ಮೊತ್ತ, ಸಮಯ ಮತ್ತು ದಾಖಲೆ, ವಿವರಗಳನ್ನು ನೀಡಿ ಅದನ್ನು ಪಡೆದುಕೊಳ್ಳಬಹುದು” ಎಂದು ವ್ಯಾಪಾರಿ ಜಾಸಿರ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story