4.10ಲಕ್ಷ ರೂ. ಪ್ರಾಕೃತಿಕ ವಿಕೋಪದ ಪರಿಹಾರ ಧನ ವಿತರಣೆ

ಬ್ರಹ್ಮಾವರ, ಆ.18: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕುಟುಂಬಗಳಿಗೆ ಇಂದು ಪ್ರಾಕೃತಿಕ ವಿಕೋಪ ಪರಿಹಾರ ಧನದ ಚೆಕ್‌ನ್ನು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ಶಾಸಕ ಕೆ.ರಘುಪತಿ ಭಟ್ ವಿತರಿಸಿದರು.
ಹೇರೂರು ಗ್ರಾಮದ ಗುಲಾಬಿ, ಚೇರ್ಕಾಡಿ ಗ್ರಾಮದ ರುಕ್ಮಿಣಿ ಬಾಯಿ, ಕಮಲ, ಹಲುವಳ್ಳಿ ಗ್ರಾಮದ ಅನಂತ ಮರಕಾಲ, ಹಾವಂಜೆ ಗ್ರಾಮದ ಸುಂದರ ಪೂಜಾರಿ, ಕೆಂಜೂರು ಗ್ರಾಮದ ಭಾಸ್ಕರ ಕುಲಾಲ್, ಲ್ಯಾನ್ಸಿ ಪಿಂಟೋ ಅವರಿಗೆ ಒಟ್ಟು 4,10,300ರೂ. ಮೊತ್ತದ ಪರಿಹಾರದ ಚೆಕ್ಕನ್ನು ವಿತರಿಸ ಲಾಯಿತು.
ಇದೇ ಸಂದರ್ಭದಲ್ಲಿ ಹಾರಾಡಿ, ಹಾವಂಜೆ, ಕುದಿ, ಹೊಸೂರು, ಹೇರೂರು ಗ್ರಾಪಂ ವ್ಯಾಪ್ತಿಯ 22 ಫಲಾನುಭವಿಗಳಿಗೆ 94/ಸಿಸಿ ಅಡಿಯ ಹಕ್ಕು ಪತ್ರವನ್ನು ವಿತರಿಸಲಾಯಿತು. ಚೇರ್ಕಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಮಾಜಿ ಸದಸ್ಯ ಕಮಲಾಕ್ಷ್ ಹೆಬ್ಬಾರ್, ಕೊಕ್ಕರ್ಣೆ ಗ್ರಾಪಂ ಮಾಜಿ ಸದಸ್ಯರಾದ ವಸಂತ್ ಸೇರ್ವೆಗಾರ್, ಪ್ರಸನ್ನ ಶೆಟ್ಟಿ, ಹಾವಂಜೆ ಗ್ರಾಪಂ ಮಾಜಿ ಉಪಾಧ್ಯಕ್ಷ ಸತೀಶ್, ಕಳ್ತೂರು ಗ್ರಾಪಂ ಮಾಜಿ ಸದಸ್ಯರಾದ ಆದರ್ಶ ಶೆಟ್ಟಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಗಳು ಉಪಸ್ಥಿತರಿದ್ದರು







