ಅಕ್ರಮ ಕೋಣ ಸಾಗಾಟ ಆರೋಪ : ಇಬ್ಬರ ಬಂಧನ
ಅಮಾಸೆಬೈಲು, ಆ.18: ಟ್ರಕ್‌ನಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಅಮಾಸೆಬೈಲು ಪೊಲೀಸರು ಹೊಸಂಗಡಿ ಚೆಕ್ಪೋಸ್ಟ್ ಬಳಿ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಶಕೀಲ್(35) ಹಾಗೂ ಪಕ್ರಿ ಆಲಂ(24) ಬಂಧಿತ ಆರೋಪಿಗಳು.
ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಹೋಗು ತ್ತಿದ್ದ ಟ್ರಕ್‌ನ್ನು ಪರಿಶೀಲಿಸಿದಾಗ ಸುಮಾರು 37 ಕೋಣಗಳು ಪತ್ತೆಯಾಗಿವೆ. ಪೊಲೀಸರು ಟ್ರಕ್ ಹಾಗೂ ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





