ಆ.19-20: ಮಂಗಳೂರು ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು, ಆ.18: ತಾಲೂಕಿನ ಹಲವು ಉಪಕೇಂದ್ರಗಳು, ಫೀಡರ್‌ಗಳಲ್ಲಿ (ಜಂಗಲ್ ಕಟ್ಟಿಂಗ್, ಜಿಒಎಸ್ ನಿರ್ವಹಣೆ ಮತ್ತು ಇತರ ನಿರ್ವಹಣೆ, ವಿದ್ಯುತ್ ಪರಿವರ್ತಕ) ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ತಾಲೂಕಿನ ವಿವಿಧೆಡೆ ಆ.19-20ರಂದು ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ಕೊಣಾಜೆ: ಆ.19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ 110/33/11 ಕೆ.ವಿ. ಕೊಣಾಜೆ ಉಪಕೇಂದ್ರದ 20 ಎಂವಿಎ ವಿದ್ಯುತ್ ಪರಿವರ್ತಕದಲ್ಲಿ ತುರ್ತುನಿರ್ವಹಣಾ ಕಾಮಗಾರಿಯನ್ನು ಕಾವೂರು ಕೆಪಿಟಿಸಿಎಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರಿಂದ 110/33/11ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮಂಜನಾಡಿ, ಕಿನ್ಯಾ, ಪಜೀರ್ ಹಾಗೂ ಬೊಳಿಯಾರ್ ಫೀಡರ್‌ಗಳ ತಲಪಾಡಿ, ಕೆ.ಸಿ. ರೋಡ್, ಕೊಂಡಾಣ, ಪನೀರ್, ಸಾಂತ್ಯ, ಕುರಿಯ, ಬೆಳರಿಂಗೆ, ಪುಳಿತ್ತಡಿ, ಬಗಂಬಿಲ, ವ್ಶೆದ್ಯನಾಥ ನಗರ, ಮಂಜನಾಡಿ, ಮೊಂಟೆಪದವು, ಕಿನ್ಯಾ, ರೆಂಜಾಡಿ, ಬದ್ಯಾರ್, ಬಗಂಬಿಲ, ದೇರಳಕಟ್ಟೆ, ನಾಟೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಯೆಯ್ಯಡಿ: ಆ.20ರಂದು ಬೆಳಗ್ಗೆ 9:30ರಿಂದ ಸಂಜೆ 3:30ರವರೆಗೆ 11 ಕೆ.ವಿ. ಹರಿಪದವು ಮತ್ತು ಯೆಯ್ಯೆಡಿ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಎದುರುಪದವು, ಹರಿಪದವು, ಪೆರ್ಲಗುರಿ, ದಂಡಕೇರಿ, ಕುಂಟಾಲ್‌ಪಾಡಿ, ಯೆಯ್ಯಿಡಿ, ಮೇರಿಹಿಲ್, ಬಾರೆಬೈಲು, ವ್ಯಾಸನಗರ, ಬೋಂದೇಲ್, ಪದವಿನಂಗಡಿ, ಗುರುನಗರ, ಕೊಪ್ಪಲಕಾಡು, ಲ್ಯಾಂಡ್ ಲಿಂಕ್ಸ್, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ಕಟೀಲು: ಆ.20ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 11 ಕೆ.ವಿ. ಪೆರ್ಮುದೆ ಮತ್ತು ಕಟೀಲು ಟೆಂಪಲ್ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಸ್ವಾಮಿಲಪದವು, ಕೋರಕಂಬ್ಳ, ಭಟ್ರಕೆರೆ, ಪೆರ್ಮುದೆ, ಕ್ರಾಸ್‌ಪದವು, ಕಣಿಕಟ್ಟ, ಕುಂಬೋಡಿ, ಬಡಗ ಎಕ್ಕಾರು, ಹುಣ್ಸೆಕಟ್ಟೆ, ಶಿಬರೂರು, ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಇಪಿಐಪಿ ಇಂಡಸ್ಟ್ರೀಯಲ್: ಆ.20ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಪಿಐಪಿ ಇಂಡಸ್ಟ್ರೀಯಲ್ ವಿದ್ಯುತ್ ಪೂರೈಸುವ ಒಡ್ಡೂರು ಮತ್ತು ಇಪಿಐಪಿ ಫೀಡರ್‌ಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಇಪಿಐಪಿ ಇಂಡಸ್ಟ್ರೀಯಲ್ ಏರಿಯಾ, ಗಂಜೀಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸು ವಂತೆ ಮೆಸ್ಕಾಂ ಪ್ರಕಟನೆ ತಿಳಿಸಿದೆ.







