ಕೊಣಾಜೆ: ಬಾವಿಗೆ ಬಿದ್ದು ಯುವಕ ಮೃತ್ಯು

ಕೊಣಾಜೆ : ಯುವಕನೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೋಳಿಯಾರ್ ಗ್ರಾಮದಲ್ಲಿ ಸಂಭವಿಸಿದೆ.
ಬೋಳಿಯಾರ್ ಗ್ರಾಮದ ಧರ್ಮತೋಟ ನಿವಾಸಿ ಕ್ಸೇವಿಯರ್ ಕ್ರಾಸ್ತ ಎಂಬವರ ಮಗನಿಖಿಲ್ ಕ್ರಾಸ್ತ(28) ಮೃತ ಯುವಕ.
ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ನಿಖಿಲ್, ಸಂಜೆಯ ನಂತರ ನಾಪತ್ತೆಯಾಗಿದ್ದು, ಮನೆಮಂದಿ ಹುಡುಕಾಟ ನಡೆಸಿದರೂ ಪ್ರಯೋಜನ ಆಗದ ಕಾರಣ ಸ್ಥಳೀಯರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಅದರಂತೆ ಸ್ಥಳೀಯ ಯುವಕರು ಹುಡುಕಾಟ ನಡೆಸಿ ಬಾವಿಯಿಂದ ಮೃತದೇಹ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.
ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದಿರುವ ಶಂಕೆ ಮನೆಮಂದಿ ವ್ಯಕ್ತಪಡಿಸಿ, ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಮೃತ ಯುವಕ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
Next Story





