ಮಳೆಗಾಲದಲ್ಲಿ ಸಾಂಕ್ರಾಮಿಕ ಮತ್ತು ವಾಹಕ ಜನ್ಯ ರೋಗಗಳ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಗೆ ಪ್ರಧಾನಿ ಕರೆ

ಹೊಸದಿಲ್ಲಿ,ಆ.18: ಪ್ರಸಕ್ತ ನಡೆಯುತ್ತಿರುವ ಮಳೆಗಾಲವು ಉಷ್ಣವಲಯ ಮೂಲದ ಸಾಂಕ್ರಾಮಿಕ ರೋಗಗಳು ಮತ್ತು ಮಲೇರಿಯಾದಂತಹ ವಾಹಕ ಜನ್ಯ ರೋಗಗಳು ಹರಡುವ ಸಮಯವಾಗಿರುವುದರಿಂದ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶದ ಜನತೆಯನ್ನು ಆಗ್ರಹಿಸಿದ್ದಾರೆ.
‘ ಸರಕಾರವು ಸಹ ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ಮತ್ತು ರೋಗಪೀಡಿತರಿಗೆ ವೈದ್ಯಕೀಯ ನೆರವು ದೊರೆಯುವಂತೆ ನೋಡಿಕೊಳ್ಳುತ್ತಿದೆ. ಸುರಕ್ಷಿತವಾಗಿರಿ ಮತ್ತು ಸುಖವಾಗಿರಿ ’ಎಂದೂ ಅವರು ಟ್ವೀಟಿಸಿದ್ದಾರೆ.
ವಾಹಕ ಜನ್ಯ ರೋಗಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆಗಳ ಕುರಿತು ಡಿಡಿ ನ್ಯೂಸ್‌ನ ವರದಿಯೊಂದನ್ನು ಸಹ ಮೋದಿ ತನ್ನ ಟ್ವೀಟ್‌ಗೆ ಟ್ಯಾಗ್ ಮಾಡಿದ್ದಾರೆ.
Next Story





