ಮುಹಮ್ಮದ್ ಕೋಯ ನಿಧನ

ಬಂಟ್ವಾಳ, ಆ.18: ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಸೈಯದ್ ಮುಹಮ್ಮದ್ ಕೋಯ (75) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಮಾರಿಪಳ್ಳ ಬದ್ರಿಯ್ಯೀನ್ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಪುದು ಮಂಡಲ ಪಂಚಾಯತ್ ಮಾಜಿ ಉಪ ಪ್ರಧಾನರಾಗಿ, ಮಾರಿಪಳ್ಳ ಹಿದಾಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ನಾಲ್ಕು ಪುತ್ರರು, ನಾಲ್ಕು ಪುತ್ರಿಯರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ: ಮುಹಮ್ಮದ್ ಕೋಯ ಅವರ ಮನೆಗೆ ಮಂಗಳೂರು ಶಾಸಕ ಯು ಟಿ ಖಾದರ್, ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲೀಡಿಯಾ ಪಿಂಟೊ, ಫರಂಗಿಪೇಟೆ ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ, ತಾ ಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ರೆಸ್ಕೂ ಚಾರಿಟೇಬಲ್ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಹುಸೈನ್ ಪಾಡಿ, ಅಖ್ತರ್ ಹುಸೈನ್, ಪ್ರಮುಖರಾದ ಇಸ್ಮಾಯಿಲ್ ಕೆ.ಇ.ಎಲ್., ಇಕ್ಬಾಲ್ ಸುಜೀರ್, ಮಜೀದ್ ಪೇರಿಮಾರ್, ನಾಸಿರ್ ಮದನಿನಗರ ಮೊದಲಾದವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.





