ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಗೌರವ ಆರೋಪ: ಇನ್‍ಸ್ಪೆಕ್ಟರ್ ಅಮಾನತಿಗೆ ಒತ್ತಾಯ
ಬಳ್ಳಾರಿ. ಆ.18: ಬೆಳಗಾವಿಯ ಪೀರನಾಡಿಯಲ್ಲಿ ಸ್ಥಾಪಿಸಲಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ರಾಷ್ಟ್ರಧ್ವಜ ತೆಗೆದು ಹಾಕಿ ಅಗೌರವ ತೋರಿದ ವಡಗಾವಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಕುರುಬರ ಪಡೆ ಒತ್ತಾಯಿಸಿದೆ.
ಪಡೆಯ ಕಾರ್ಯಕರ್ತರು ಹೊಸಪೇಟೆ ತಾಲೂಕು ತಹಶೀಲ್ದಾರ್ ಎಚ್.ವಿಶ್ವನಾಥ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನುಭಾವ. ಅಂತಹವರ ಪ್ರತಿಮೆ ತೆರವುಗೊಳಿಸಿ ಅಪಮಾನ ಮಾಡಲಾಗಿದೆ. ಕನ್ನಡಿಗರ ಮೇಲೆ ಲಾಠಿಪ್ರಹಾರ ನಡೆಸಿ ಇನ್‍ಸ್ಪೆಕ್ಟರ್ ದೌರ್ಜನ್ಯ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು. ಪ್ರತಿಮೆ, ರಾಷ್ಟ್ರ ಧ್ವಜ ಮೂಲ ಸ್ಥಳದಲ್ಲಿ ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
Next Story





