‘ದಲಿತ ಸಾಹಿತ್ಯ ಸೌಂದರ್ಯ ಪ್ರಜ್ಞೆ’ ಭಾಷಾಂತರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬೆಂಗಳೂರು, ಆ.18: ಡಾ.ವಿಠ್ಠಲ್ ರಾವ್ ಟಿ.ಗಾಯಕ್‍ವಾಡ್ ಅವರ ‘ದಲಿತ ಸಾಹಿತ್ಯ ಸೌಂದರ್ಯ ಪ್ರಜ್ಞೆ’ ಭಾಷಾಂತರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ-2019 ಲಭಿಸಿದೆ. ಈ ಕೃತಿಯನ್ನು ಮೂಲತಃ ಶರಣ್ ಕುಮಾರ್ ಲಿಂಬಾಳೆ ಮರಾಠಿ ಭಾಷೆಯಲ್ಲಿ ‘ದಲಿತ್ ಸಾಹಿತ್ಯಚೆ ಸೌಂದರ್ಯ ಶಾಸ್ತ್ರ’ ಎಂಬ ಕೃತಿಯನ್ನು ರಚಿಸಿದ್ದರು.
ಡಾ.ಆರ್.ಪೂರ್ಣಿಮಾ, ಎಸ್.ದಿವಾಕರ್ ಹಾಗೂ ಡಾ.ಅರವಿಂದ ಮಾಲಗತ್ತಿ ಅವರನ್ನು ಒಳಗೊಂಡ ಮೂರು ಮಂದಿಯ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





