ಕೊಣಾಜೆ, ಆ.19: ಇಂದು ಮುಂಜಾವ ಸುರಿದ ಗಾಳಿಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಕೊಣಾಜೆ ಗ್ರಾಮದ ವೆಂಕಪ್ಪ ಶೆಟ್ಟಿಗಾರ್ ಎಂಬವರ ವಾಸದ ಮನೆಯ ಛಾವಣಿ ಬುಧವಾರ ಮುಂಜಾವ 1:30ರ ಸುಮಾರಿಗೆ ಕುಸಿದಿದೆ. ಇದರಿಂದ ಗೋಡೆಗಳು ಕೂಡಾ ಕುಸಿದಿವೆ.