ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಜೋ ಬೈಡನ್ ಅಧಿಕೃತ ನೇಮಕ

ಮಿಲ್ವಾಕೀ (ಅಮೆರಿಕ), ಆ. 19: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬೈಡನ್‌ರನ್ನು ಮಂಗಳವಾರ ಅಧಿಕೃತವಾಗಿ ನೇಮಿಸಲಾಗಿದೆ.
ವಾಶಿಂಗ್ಟನ್‌ನ ಈ ಹಿರಿಯ ವ್ಯಕ್ತಿಯನ್ನು ಱಧೈರ್ಯಶಾಲಿ ಪುರುಷೞಎಂಬುದಾಗಿ ಬಣ್ಣಿಸಿರುವ ಡೆಮಾಕ್ರಟಿಕ್ ಪಕ್ಷದ ನಾಯಕರು, ಡೊನಾಲ್ಡ್ ಟ್ರಂಪ್ ಆಡಳಿತದ ನಾಲ್ಕು ವರ್ಷಗಳ ಅವಧಿಯ ಱಅವ್ಯವಸ್ಥೆೞಯನ್ನು ಅವರು ಗುಡಿಸಿ ಹಾಕುತ್ತಾರೆ ಎಂದು ಹೇಳಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆದ ಮತದಾನದಲ್ಲಿ, ಎಲ್ಲ 50 ದೇಶಗಳು ಮತ್ತು ಅಮೆರಿಕದ ಆಡಳಿತಕ್ಕೆ ಒಳಪಟ್ಟ ಏಳು ಭೂಭಾಗಗಳ ಜನರು ಬೈಡನ್ ಪರವಾಗಿ ಮತ ಚಲಾಯಿಸಿದ್ದಾರೆ.
ಎಲ್ಲ ವರ್ಗಗಳಿಗೆ ಸೇರಿದ ರಾಜಕಾರಣಿಗಳು, ಸಾಮಾನ್ಯ ಅಮೆರಿಕನ್ನರು ಹಾಗೂ ಬೈಡನ್‌ರ ಈ ಹಿಂದಿನ ಪ್ರತಿಸ್ಪರ್ಧಿಗಳೂ 77 ವರ್ಷದ ಬೈಡನ್‌ರ ನೇಮಕಾತಿಯಲ್ಲಿ ಸಹಕರಿಸಿದರು.
ಜಗತ್ತೇ ನನಗೆ ಸಿಕ್ಕಿದಂತಾಗಿದೆ: ಬೈಡನ್
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ತನ್ನನ್ನು ನೇಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಜೋ ಬೈಡನ್, ಱಱನಿಮ್ಮೆಲ್ಲರಿಗೂ ನನ್ನ ಹೃದಯದಾಳದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆೞೞಎಂದು ಲೈವ್ ವೀಡಿಯೊ ಲಿಂಕ್ ಮೂಲಕ ಹೇಳಿದರು.
ಱಱಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಜಗತ್ತೇ ದೊರೆತಂತಾಗಿದೆೞೞಎಂದು ಅವರು ನುಡಿದರು.







