ಕಂಕನಾಡಿ: ರೆಸ್ಟೋರೆಂಟ್‌ನ ಶೆಡ್‌ನಲ್ಲಿ ಮೃತದೇಹ ಪತ್ತೆ
ಮಂಗಳೂರು, ಆ.19: ಮಂಗಳೂರು ನಗರದ ಕಂಕನಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಶೆಡ್ ಬಳಿ ಮೃತದೇಹವೊಂದು ಮಂಗಳವಾರ ಪತ್ತೆಯಾಗಿದೆ.
ಮೃತದೇಹವು ಮಹೇಶ್ (53) ಎಂಬವರದ್ದು ಎಂದು ಗುರುತಿಸಲಾಗಿದೆ.
‘ರೆಸ್ಟೋರೆಂಟ್‌ನ ಶೆಡ್ಡಿನ ಪಕ್ಕಾಸಿಗೆ ಹಳೆಯ ಇಲೆಕ್ಟ್ರಿಕಲ್ ವೈರ್‌ನ್ನು ಕಟ್ಟಿ ವೈರ್‌ನ ಇನ್ನೊಂದು ತುದಿಯನ್ನು ಕುತ್ತಿಗೆಗೆ ಉರುಳಾಗಿ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಹದ ಭಾರದಿಂದ ವೈರ್ ತುಂಡಾಗಿ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಚಹರೆ: ಎತ್ತರ: 5.5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಅಗಲ ಮುಖ. ಕಪ್ಪು-ಬಿಳಿ ಚೌಕುಳಿ ಬರ್ಬುಡ ಚಡ್ಡಿ, ಅರ್ಧ ತೋಳಿನ ನೇರಳೆ ಬಣ್ಣದ ಶರ್ಟು ಧರಿಸಿದ್ದಾರೆ. ವಾರಸುದಾರರು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ (ಕದ್ರಿ) ಠಾಣೆ (0824- 2220520) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





