ಅಬ್ದುಲ್ ಹಮೀದ್ ಕಲ್ಲರ್ಪೆ
ಪುತ್ತೂರು: ಆರ್ಯಾಪು ಗ್ರಾದಮ ಸಂಟ್ಯಾರು ಕಲ್ಲರ್ಪೆ ನಿವಾಸಿ ಅಬ್ದುಲ್ ಹಮೀದ್ ಕಲ್ಲರ್ಪೆ(70 ) ಹೃದಯಾಘಾತದಿಂದ ಮಂಗಳವಾರ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಉಪ್ಪಿನಂಗಡಿ ಮುಖ್ರಿ ಕುಟುಂಬದ ಹಿರಿಯ ವ್ಯಕ್ತಿಯಾಗಿರುವ ಅಬ್ದುಲ್ ಹಮೀದ್ ಅವರು ವೃತ್ತಿಯಲ್ಲಿ ಟೈಲರ್ ಆಗಿದ್ದು, ವಾಚು ರಿಪೇರಿ ಮಾಡುವ ಕಾಯಕವನ್ನೂ ನಡೆಸುತ್ತಿದ್ದರು. ಪುತ್ತೂರು ಕೇಂದ್ರ ಜುಮಾ ಮಸೀದಿ ಕಟ್ಟಡದಲ್ಲಿ ಟೈಲರ್ ಶಾಪ್ ಹೊಂದಿದ್ದರು. ಟೈಲರ್ ಹಮೀದ್‍ಚ್ಚ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಮಂಗಳವಾರ ರಾತ್ರಿ ಸಂಟ್ಯಾರ್ ಮಸೀದಿ ವಠಾರದಲ್ಲಿ ನಡೆಯಿತು.
Next Story





