ಕುದ್ಲೂರು: ನೆಟ್‌ವರ್ಕ್ ಸಮಸ್ಯೆಗೆ ಏರ್‌ಟೆಲ್ ಸ್ಪಂದನೆ
ಮಂಗಳೂರು, ಆ.19: ಕಡಬ ತಾಲೂಕಿನ ಕೊಯಿಲ ಗ್ರಾಮದ ಕುದ್ಲೂರು ಭಾಗದ ಜನತೆ ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರದ ಆಶಾಕಿರಣವೊಂದು ಮೂಡಿದೆ. ನೆಟ್‌ವರ್ಕ್ ಸಮಸ್ಯೆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದಂತೆಯೇ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ಸಕಾರಾತ್ಮಕವಾಗಿ ಸ್ಪಂದಿಸಿದೆ.
ಕೊಯಿಲ ಪ್ರದೇಶದಲ್ಲಿ ಸಮರ್ಪಕವಾದ ನೆಟ್‌ವರ್ಕ್ ಸಿಗದೇ ಇರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಟೆಲಿಕಾಂ ಅಧಿಕಾರಿಗಳನ್ನು, ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಮನವಿ ನೀಡಿದ್ದರೂ ಪ್ರಯತ್ನ ಯಶಸ್ವಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಏರ್‌ಟೆಲ್ ಭರವಸೆ: ವಿದ್ಯಾರ್ಥಿಗಳು ಮತ್ತು ಸ್ಥಳೀಯರ ನೆಟ್‌ವರ್ಕ್ ಸಮಸ್ಯೆ ಅರಿತು ಸಂಪ್ಯಾಡಿ ಎಂಬಲ್ಲಿ ಟವರ್ ಸ್ತಂಭ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಶೀಘ್ರದಲ್ಲೇ ಟವರ್ ನಿರ್ಮಾಣ ಪೂರ್ತಿಯಾಗಲಿದ್ದು, ನಂತರ ಯಾವುದೇ ರೀತಿಯ ನೆಟ್ವರ್ಕ್ ಸಮಸ್ಯೆ ಇರುವುದಿಲ್ಲ ಎಂದು ಏರ್ಟೆಲ್ ಸಂಸ್ಥೆಯ ಮನೋಜ್ ಭರವಸೆ ನೀಡಿದ್ದಾರೆ.
Next Story





