ಯೆನೆಪೊಯ ವಿವಿಗೆ ಅಟಲ್ ಶ್ರೇಯಾಂಕದಲ್ಲಿ ಬ್ಯಾಂಡ್ 'ಎ' ಶ್ರೇಯಾಂಕ

ಮಂಗಳೂರು, ಆ.19: ಯೆನೆಪೊಯ ವಿಶ್ವವಿದ್ಯಾನಿಲಯಕ್ಕೆ ಭಾರತ ಸರಕಾರದ ಅಟಲ್ ಶ್ರೇಯಾಂಕದಲ್ಲಿ ಬ್ಯಾಂಡ್ ‘ಎ’ ಶ್ರೇಯಾಂಕ ಲಭಿಸಿದೆ.
ಶಿಕ್ಷಣ ಸಚಿವಾಲಯ, ಸರಕಾರ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಪ್ರಾಥಮಿಕವಾಗಿ ನಾವೀನ್ಯತೆ ಸಂಬಂಧಿತ ಸೂಚಕಗಳ ಮೇಲೆ ವ್ಯವಸ್ಥಿತವಾಗಿ ಶ್ರೇಣೀಕರಿಸಲು ಭಾರತದ, ‘ಅಟಲ್ ರ್ಯಾಂಕಿಂಗ್ ಆಫ್ ಇನ್‌ಸ್ಟಿಟ್ಯೂಶನ್ಸ್ ಆ್ಯಂಡ್ ಇನ್ನೋವೇಶನ್ ಅಚೀವ್ ಮೆಂಟ್ಸ್’(ಎಆರ್‌ಐಐಎ) ಅನ್ನು ಪ್ರಾರಂಭಿಸಿದೆ.
ಈ ವರ್ಷ ವಿಶ್ವವಿದ್ಯಾನಿಲಯಗಳಿಗೆ ಈ ಕೆಳಗಿನ ಆರು ನಿರ್ಣಾಯಕ ಸೂಚಕಗಳನ್ನು ಆಧರಿಸಿ ಸ್ಥಾನ ನೀಡಲಾಗಿದೆ.
ಐಪಿಆರ್, ನಾವೀನ್ಯತೆ, ಪ್ರಾರಂಭ ಮತ್ತು ಉದ್ಯಮಶೀಲತೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು (7.5 ವೈಟೇಜ್)
ಪ್ರಿ-ಇನ್ಕ್ಯುಬೇಶನ್ ಮತ್ತು ಇನ್ಕ್ಯುಬೇಶನ್ ಮೂಲಸೌಕರ್ಯ ಮತ್ತು ಐ ಇ ಬೆಂಬಲಿಸುವ ಸೌಲಭ್ಯಗಳು (7.5 ವೈಟೇಜ್)
ಐ ಮತ್ತು ಇ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಬೆಂಬಲಿಸಲು ವಾರ್ಷಿಕ ಬಜೆಟ್‌ನಲ್ಲಿನ ಖರ್ಚು (13 ವೈಟೇಜ್)
ನಾವೀನ್ಯತೆ, ಐಪಿಆರ್ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕುರಿತ ಕೋರ್ಸ್‌ಗಳು (05 ವೈಟೇಜ್)
ಐಪಿ, ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯೀಕರಣ (32 ವೈಟೇಜ್)
ಯಶಸ್ವಿ ನಾವೀನ್ಯತೆ ಹಾಗೂ ಸ್ಟಾರ್ಟ್ ಅಪ್‌ಗಳು ಮತ್ತು ಧನಸಹಾಯ ನಾವೀನ್ಯತೆ ಹಾಗೂ ಸ್ಟಾರ್ಟ್ ಅಪ್‌ಗಳು (35 ವೈಟೇಜ್)
ಈ ಶ್ರೇಣಿಗಳನ್ನು ಸಾರ್ವಜನಿಕವಾಗಿ ಧನಸಹಾಯ ಪಡೆದ ಸಂಸ್ಥೆಗಳು ಮತ್ತು ಖಾಸಗಿ ಅಥವಾ ಸ್ವ-ಹಣಕಾಸು ಸಂಸ್ಥೆಗಳೆಂದು ಎರಡು ವಿಶಾಲ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ.
ಎಆರ್‌ಐಐಎ ಶ್ರೇಯಾಂಕ 2020ರಲ್ಲಿ ವಿವಿಧ ವಿಭಾಗಗಳ ಅಡಿಯಲ್ಲಿ ಒಟ್ಟು 674 ಸಂಸ್ಥೆಗಳು ಭಾಗವಹಿಸಿದ್ದವು. ಖಾಸಗಿ ಅಥವಾ ಸ್ವ-ಹಣಕಾಸು ವಿಶ್ವವಿದ್ಯಾನಿಲಯಗಳ ಅಡಿಯಲ್ಲಿ, ಅಗ್ರ 5 ಸಂಸ್ಥೆಗಳನ್ನು ಹೊರತುಪಡಿಸಿ, ಸಂಸ್ಥೆಗಳಿಗೆ ಬ್ಯಾಂಡ್ ಎ (6ರಿಂದ 25ನೇ ಸ್ಥಾನ), ಬ್ಯಾಂಡ್ ಬಿ (26ರಿಂದ 50) ಮತ್ತು ಬ್ಯಾಂಡ್ ಸಿ (50ಕ್ಕಿಂತ ಹೆಚ್ಚಿನ ಸ್ಥಾನದಲ್ಲಿದೆ) ಸ್ಥಾನಗಳನ್ನು ನೀಡಲಾಗಿದೆ.
ಯೆನೆಪೊಯ (ಪರಿಗಣಿಸಲ್ಪಟ್ಟ ವಿವಿ) ಮೊದಲ ಬಾರಿಗೆ ಖಾಸಗಿ ಅಥವಾ ಸ್ವ-ಹಣಕಾಸು ವಿವಿಗಳ ಅಡಿಯಲ್ಲಿ ಬ್ಯಾಂಡ್ ಎ (6ರಿಂದ 25ನೇ ಸ್ಥಾನ) ಸ್ಥಾನ ಪಡೆದಿದೆ. ಯೆನೆಪೊಯ ಹೊರತುಪಡಿಸಿ ಕರ್ನಾಟಕದ ಇತರ 4 ಸಂಸ್ಥೆಗಳು ಮಾತ್ರ ಈ ವಿಭಾಗದಲ್ಲಿ ಕಾಣಿಸಿಕೊಂಡಿವೆ. (ಜೆಎಸ್‌ಎಸ್ ಅಕಾಡಮಿ ಆಫ್ ಹೈಯರ್ ಎಜುಕೇಶನ್ ರಿಸರ್ಚ್, ಕೆಎಲ್‌ಇ ಟೆಕ್ನಾಲಜಿಕಲ್ ಯುನಿವರ್ಸಿಟಿ, ಮಣಿಪಾಲ್ ಅಕಾಡಮಿ ಆಫ್ ಹೈಯರ್ ಎಜುಕೇನ್ ಮತ್ತು ರೇವಾ ವಿಶ್ವವಿದ್ಯಾನಿಲಯ)
ಈ ಸಾಧನೆಯು ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳನ್ನು ನೀಡುವ ನಮ್ಮ ಬದ್ಧತೆಯ ಮತ್ತೊಂದು ಪುರಾವೆಯಾಗಿದೆ. ಜಾಗತಿಕವಾಗಿ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ನಾವು ಇನ್ನೂ ಹೆಚ್ಚಾಗಿ ಶ್ರಮಿಸುತ್ತೇವೆ. ಸಹ ಕುಲಪತಿಗಳಾದ ಯೆನೆಪೊಯ ಫರ್ಹಾದ್, ಉಪಕುಲಪತಿಗಳಾದ ಡಾ.ಎಂ.ವಿಜಯಕುಮಾರ್ ಮತ್ತು ಅವರ ತಂಡ ಸೇರಿದಂತೆ ಎಲ್ಲಾ ಪಾಲುದಾರರ ಪ್ರಯತ್ನವನ್ನು ಶ್ಲಾಘಿಸುತ್ತೇನೆ.
- ಅಬ್ದುಲ್ಲಾ ಕುಂಞಿ, ಯೆನೆಪೊಯ ವಿವಿ ಕುಲಾಧಿಪತಿ







