Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಚರ್ಮದ ಸಮಸ್ಯೆಗಳೇ?: ವಿಟಾಮಿನ್ ಇ ಮೂಲಕ...

ಚರ್ಮದ ಸಮಸ್ಯೆಗಳೇ?: ವಿಟಾಮಿನ್ ಇ ಮೂಲಕ ನಿವಾರಿಸಿಕೊಳ್ಳಿ

ವಾರ್ತಾಭಾರತಿವಾರ್ತಾಭಾರತಿ20 Aug 2020 12:10 AM IST
share
ಚರ್ಮದ ಸಮಸ್ಯೆಗಳೇ?: ವಿಟಾಮಿನ್ ಇ ಮೂಲಕ ನಿವಾರಿಸಿಕೊಳ್ಳಿ

ವಿಟಾಮಿನ್ ಇ ಚರ್ಮವನ್ನು ಮೃದು,ಕೋಮಲವಾಗಿರಿಸುವ ಜೊತೆಗೆ ಹೊಳಪನ್ನು ನೀಡುತ್ತದೆ. ಹೆಚ್ಚಿನ ಸ್ಕಿನ್‌ಕೇರ್‌ಗಳಲ್ಲಿ ವಿಟಾಮಿನ್ ಇ ಪ್ರಮುಖ ಘಟಕವಾಗಿದೆ. ನೀವು ಅವುಗಳನ್ನು ಬಳಸಿರಬಹುದಾದರೂ ಚರ್ಮದ ಮೇಲೆ ನೇರವಾಗಿ ವಿಟಾಮಿನ್ ಇ ತೈಲವನ್ನು ಬಳಸಿದ್ದೀರಾ? ಬಳಸಿಲ್ಲವಾದರೆ ಅದು ಚರ್ಮಕ್ಕೆ ನೀಡುವ ಆರೋಗ್ಯಲಾಭಗಳು ಗೊತ್ತಾದರೆ ನಿಮಗೆ ಅಚ್ಚರಿಯಾದೀತು.

ವಿಟಾಮಿನ್ ಇ ಚರ್ಮಕ್ಕೆ ಏಕೆ ಒಳ್ಳೆಯದು?

ವಿಟಾಮಿನ್ ಇ ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳು ಮತ್ತು ಫ್ರೀ ರ್ಯಾಡಿಕಲ್‌ಗಳು ಉಂಟು ಮಾಡುವ ಹಾನಿಯಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಇವೆರಡೂ ಸನ್‌ಬರ್ನ್,ದದ್ದುಗಳು ಮತ್ತು ಅಕಾಲಿಕ ವಯಸ್ಸಾಗುವಿಕೆ ಸೇರಿದಂತೆ ಹಲವಾರು ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿಯೇ ವಿಟಾಮಿನ್ ಇ ಚರ್ಮದ ಪಾಲಿಗೆ ವರದಾನವಾಗಿದೆ.

ವಿಟಾಮಿನ್ ಇ ಕ್ಯಾಪ್ಸೂಲ್‌ಗಳು ಎಲ್ಲ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಚರ್ಮದ ಮೇಲೆ ನೇರವಾಗಿ ವಿಟಾಮಿನ್ ಇ ತೈಲವನ್ನು ಬಳಸುವ ಕೆಲವು ವಿಧಾನಗಳು ಇಲ್ಲಿವೆ......

* ಆರ್ದ್ರಕವಾಗಿ ವಿಟಾಮಿನ್ ಇ

ವಿಟಾಮಿನ್ ಇ ಕ್ಯಾಪ್ಸೂಲ್‌ನ್ನು ತುಂಡರಿಸಿ ಅದರೊಳಗಿನ ದ್ರವವನ್ನು ಹೊರಗೆ ತೆಗೆಯಿರಿ. ನೀವು ನಿಯಮಿತವಾಗಿ ಬಳಸುವ ಸ್ಕಿನ್ ಕ್ರೀಮ್‌ಗೆ ಈ ವಿಟಾಮಿನ್ ಇ ತೈಲವನ್ನು ಮಿಶ್ರಗೊಳಿಸಿ. ನೈಟ್ ಕ್ರೀಮ್‌ಗೆ ವಿಟಾಮಿನ್ ಇ ತೈಲವನ್ನು ಬೆರೆಸಿದರೆ ಒಳ್ಳೆಯದು,ಅದರಿಂದ ಚರ್ಮವು ಸುಸ್ಥಿತಿಗೆ ಮರಳಲು ಇಡೀ ರಾತ್ರಿ ಅವಕಾಶ ದೊರೆಯುತ್ತದೆ. ವಿಟಾಮಿನ್ ಇ ತೈಲವನ್ನು ಬಾಡಿ ಲೋಷನ್‌ಗಳು ಮತ್ತು ಡೇ ಕ್ರೀಮ್‌ಗೆ ಬೆರೆಸಬಹುದು.

* ನೈಟ್ ಐ ಸೀರಮ್

ವಿಟಾಮಿನ್ ಇ ಕ್ಯಾಪ್ಸೂಲ್‌ನಿಂದ ತೈಲವನ್ನು ಹೊರತೆಗೆದು ಅದನ್ನು ಅಂಗೈಯಲ್ಲಿ ಹಾಕಿಕೊಳ್ಳಿ. ಸ್ವಚ್ಛವಾದ ಬೆರಳುಗಳಿಂದ ಅಥವಾ ಹತ್ತಿಯ ತುಂಡಿನಿಂದ ಅದನ್ನು ಕಣ್ಣುಗಳ ಸುತ್ತ ಲೇಪಿಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ. ಚರ್ಮವು ಸುಕ್ಕುಗಟ್ಟುವುದನ್ನು ತಡೆಯಲು ಮತ್ತು ನಿಮ್ಮ ಮುಖವನ್ನು ತಾರುಣ್ಯಪೂರ್ಣವಾಗಿರಿಸಲು ಈ ತೈಲವನ್ನು ಬಾಯಿಯ ಸುತ್ತ ಮತ್ತು ಹಣೆಗೂ ಹಚ್ಚಿಕೊಳ್ಳಬಹುದು. ಈ ತೈಲವನ್ನು ಇನ್ನೊಂದು ಆರ್ಗಾನಿಕ್ ಐ ಕ್ರೀಮ್ ಜೊತೆಗೂ ಮಿಶ್ರಗೊಳಿಸಬಹುದು. ಆದರೆ ಈ ತೈಲವು ಅಂಟಂಟಾಗಿರುವುದರಿಂದ ಚರ್ಮಕ್ಕೆ ಅತಿಯಾಗಿ ಲೇಪಿಸಿಕೊಳ್ಳಬೇಡಿ. ಅತಿಯಾದ ಬಳಕೆಯು ಹೆಚ್ಚಿನ ಫಲಿತಾಂಶವನ್ನೇನೂ ನೀಡುವುದಿಲ್ಲ ಎನ್ನುವುದು ನೆನಪಿನಲ್ಲಿರಲಿ.

* ಚರ್ಮವನ್ನು ಮೃದುವಾಗಿಸುತ್ತದೆ

ಮೊಣಕೈ ಮತ್ತು ಮಂಡಿಗಳ ಸುತ್ತಲಿನ ಚರ್ಮವು ಒಣಗಿರುವುದು ಮತ್ತು ಒರಟಾಗಿರುವುದು ಸಾಮಾನ್ಯ. ಶರೀರದ ಇತರ ಭಾಗಗಳ ಚರ್ಮದ ಬಗ್ಗೆ ವಹಿಸುವ ಕಾಳಜಿಯನ್ನು ನಾವು ಈ ಜಾಗಗಳ ಬಗ್ಗೆ ವಹಿಸುವುದಿಲ್ಲ. ಕಾಲಕ್ರಮೇಣ ಈ ಜಾಗಗಳಲ್ಲಿಯ ಚರ್ಮ ಒಣಗುತ್ತದೆ ಮತ್ತು ತನ್ನ ಮೂಲಸ್ವರೂಪವನ್ನು ಕಳೆದುಕೊಳ್ಳುತ್ತದೆ. ವಿಟಾಮಿನ್ ಇ ತೈಲದ ಬಳಕೆಯು ಇಲ್ಲಿಯ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಕಪ್ಪುಛಾಯೆಯನ್ನು ಕಡಿಮೆಗೊಳಿಸುತ್ತದೆ. ಮೊದಲು ಮೃತಕೋಶಗಳನ್ನು ನಿರ್ಮೂಲಿಸಲು ಚರ್ಮವನ್ನು ಚೆನ್ನಾಗಿ ಉಜ್ಜಿರಿ ಮತ್ತು ನಂತರ ವಿಟಾಮಿನ್ ಇ ತೈಲವನ್ನು ಲೇಪಿಸಿ ಲಘುವಾಗಿ ಮಸಾಜ್ ಮಾಡಿ. ವಾರದಲ್ಲಿ 3-4 ಬಾರಿ ಇದನ್ನು ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

* ಒಡೆದ ತುಟಿಗಳಿಗೆ

ಒಣ ಮತ್ತು ಒಡೆದ ತುಟಿಗಳಿಂದ ನಿಮಗೆ ಕಿರಿಕಿರಿಯಾಗಿದ್ದರೆ ವಿಟಾಮಿನ್ ಇ ಅತ್ಯುತ್ತಮ ಪರಿಹಾರವಾಗಿದೆ. ವಿಟಾಮಿನ್ ಇ ತೈಲವನ್ನು ತುಟಿಗೆ ನೇರವಾಗಿ ಲೇಪಿಸಿ ಮಸಾಜ್ ಮಾಡಬಹುದು. ಲಿಪ್ ಬಾಮ್‌ಗೆ ಈ ತೈಲವನ್ನು ಸೇರಿಸಿಯೂ ಬಳಸಬಹುದು. ಇದರಿಂದ ತುಟಿಯು ತುಂಬಿಕೊಳ್ಳುವುದರ ಜೊತೆಗೆ ಗುಲಾಬಿ ವರ್ಣವನ್ನೂ ಪಡೆಯುತ್ತದೆ.

* ಸನ್‌ಬರ್ನ್‌ಗಳಿಗೆ ವಿಟಾಮಿನ್ ಇ

ಬಿಸಿಲಿನಿಂದ ಚರ್ಮ ಸುಟ್ಟು ಹಾನಿಯಾಗಿದ್ದರೆ ವಿಟಾಮಿನ್ ಇ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಬೌಲ್‌ನಲ್ಲಿ ಸ್ವಲ್ಪ ಮೊಸರು,ಲಿಂಬೆರಸ ಮತ್ತು ವಿಟಾಮಿನ್ ಇ ತೈಲವನ್ನು ಬೆರೆಸಿ ಮೃದುವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಈ ಪೇಸ್ಟ್‌ನ್ನು ಪೀಡಿತ ಜಾಗಗಳಿಗೆ ಲೇಪಿಸಿಕೊಳ್ಳಿ ಮತ್ತು 30-40 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲೆ ಹಿತಕರ ಪರಿಣಾಮವುಂಟಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X