ಹರೇಕಳ: ಅಭಿವೃದ್ಧಿ ಅಧಿಕಾರಿ ಗೈರು, ಕ್ರಮಕ್ಕೆ ಆಗ್ರಹಿಸಿ ಡಿವೈಎಫ್ಐ ಮನವಿ
ಕೊಣಾಜೆ: ಹರೇಕಳ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ಅವರು ನೇಮಕವಾದ ಬಳಿಕ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಅವರು ಇಲ್ಲಿಯ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹರೇಕಳ ಡಿವೈಎಫ್ ಐ ಘಟಕವು ದ.ಕ.ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದಾರೆ.
ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮೊಟಕುಗೊಳ್ಳುವ ಮೊದಲು ಈ ಬಗ್ಗೆ ಅಧ್ಯಕ್ಷ ಕಾರ್ಯದರ್ಶಿ ಅವರಿಗೆ ದೂರು ನೀಡಿದರೆ ಸ್ವಲ್ಪ ಮಟ್ಟಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದರು. ಆದರೆ ಈಗ ಆಡಳಿತಾಧಿಕಾರಿ ನೇಮಕವಾದ ಬಳಿಕ ಇಲ್ಲಿನ ಪಿಡಿಒ ವಾರಕ್ಕೆ ಒಮ್ಮೆ ಅಥವಾ ವಾರಕ್ಕೆ ಎರಡು ಸಲ ಮಾತ್ರ ಕರ್ತವ್ಯ ಕ್ಕೆ ಹಾಜರಾಗುತ್ತಾರೆ. ಈ ಬಗ್ಗೆ ವಿಚಾರಿಸಿ ಪಿಡಿಒ ಅವರು ದಿನಾ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
Next Story





