ಮಂಗಳೂರು: ವೇಶ್ಯಾವಾಟಿಕೆ ಆರೋಪ; ಇಬ್ಬರ ಬಂಧನ
ಮೂವರು ಯುವತಿಯರ ರಕ್ಷಣೆ
ಮಂಗಳೂರು, ಆ.20: ನಗರದ ಪಂಪ್ವೆಲ್ ಲಾಡ್ಜ್ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದು, ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.
ಕಡಂದಲೆ ನಿವಾಸಿ ಹರೀಶ್(45), ಬೊಳುವಾರು ನಿವಾಸಿ ಸಾಗರ್ (40) ಬಂಧಿತ ಆರೋಪಿಗಳು.
ನಗರದ ಲಾಡ್ಜ್ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಹರೀಶ್ ಲಾಡ್ಜ್ ಸಿಬ್ಬಂದಿಯಾಗಿದ್ದರೆ, ಸಾಗರ್ ದಲ್ಲಾಳಿಯಾಗಿದ್ದ. ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story