ಮೂಡುಬಿದಿರೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಸಿಯೂಟ ನೌಕರರಿಂದ ಧರಣಿ
ಮೂಡುಬಿದಿರೆ: ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ(ಸಿ.ಐ.ಟಿ.ಯು) ಮೂಡುಬಿದಿರೆ ತಾಲೂಕು ಇದರ ವತಿಯಿಂದ ಅಕ್ಷರ ದಾಸೋಹ ನೌಕರರ ವೇತನ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಬಿಸಿಯೂಟ ನೌಕರರು ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಸಿಯೂಟ ಕಾರ್ಮಿಕರಿಗೆ ಬೇಸಿಗೆ ರಜಾ ಅವಧಿಯನ್ನೂ ಒಳಗೊಂಡು ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಮಾಸಿಕ 10,000 ರೂ.ಪಾವತಿಸಿ. ಅಕ್ಷರ ದಾಸೋಹದಲ್ಲಿ ಕೇಂದ್ರೀಕೃತ ಅಡುಗೆ ಪದ್ಧತಿ ಮತ್ತು ಗುತ್ತಿಗೆ ಪದ್ಧತಿ ಜಾರಿ ಮಾಡಬಾರದು, ರಾಜ್ಯದಲ್ಲಿ ಬಿಸಿಯೂಟ ನೌಕರರಿಗೆ 2020 ಏಪ್ರಿಲ್‍ನಿಂದ ವೇತನ ಪಾವತಿಸಿ, ಕ್ವಾರೈಂಟೆನ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ವೇತನವನ್ನು ಕೂಡಲೇ ಮಾಡಬೇಕು, ಆಹಾರದ ಹಕ್ಕು ಮತ್ತು ಶಿಕ್ಷಣದ ಹಕ್ಕಿನಂತೆ ಸಾರ್ವತ್ರಿಕ ಆರೋಗ್ಯದ ರಕ್ಷಣೆಗೋಸ್ಕರ ಶಾಸನವನ್ನು ಜಾರಿ ಮಾಡಬೇಕು ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಿಐಟಿಯು ಮುಖಂಡರಾದ ರಾಧಾ, ಗಿರಿಜ ಉಪಸ್ಥಿತರಿದ್ದರು.
Next Story





