ಉಡುಪಿ: ಕೋವಿಡ್‌ಗೆ ಎರಡು ಸಾವು
ಉಡುಪಿ, ಆ.20: ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ಇಬ್ಬರು ಹಿರಿಯ ಮಹಿಳೆಯರು ಗುರುವಾರ ಕೋವಿಡ್ ಸೋಂಕಿನೊಂದಿಗೆ ಇಂದು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ.
ಕುಂದಾಪುರ ತಾಲೂಕು ಬಸ್ರೂರಿನ 70ರ ಹರೆಯದ ಮಹಿಳೆ ಉಸಿರಾಟ ತೊಂದರೆ ಹಾಗೂ ಇತರ ಸಮಸ್ಯೆಗಳಿಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಅದೇ ರೀತಿ ಕಾಪು ತಾಲೂಕು ಉಚ್ಚಿಲದ 63 ವರ್ಷದ ಮಹಿಳೆ ಯಕೃತ ಹಾಗೂ ಇತರ ಸಮಸ್ಯೆಗಳಿಗೆ ಚಿಕಿತ್ಸೆಗೆ ಸೇರಿದ್ದು, ಅವರು ಕೊರೋನ ಪಾಸಿಟಿವ್‌ನೊಂದಿಗೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
Next Story





