ರಾಜ್ಯದ 34 ಕ್ರೀಡಾ ಶಾಲೆ, ನಿಲಯಗಳಲ್ಲಿ ಕಂಪ್ಯೂಟರ್ ಲ್ಯಾಬ್ ಅಳವಡಿಕೆ
ಬೆಂಗಳೂರು, ಆ.20: ಕ್ರೀಡಾ ಇಲಾಖೆ ವತಿಯಿಂದ ರಾಜ್ಯದಲ್ಲಿರುವ 34 ಕ್ರೀಡಾ ಶಾಲೆಗಳಲ್ಲಿ ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಕ್ರೀಡಾಕೂಟಗಳ ವೀಕ್ಷಣೆ ಹಾಗೂ ಕಲಿಕೆಗೆ ಪೂರಕವಾಗುವಂತೆ ಪ್ರತಿ ಕ್ರೀಡಾ ಶಾಲೆಗೆ 5ಇಂಟೆಲ್ ಕೋರ್ ಐ5ಕಂಪ್ಯೂಟರ್ ಒಳಗೊಂಡ ಕಂಪ್ಯೂಟರ್ ಲ್ಯಾಬ್, ಇಂಟರ್ ಆಕ್ಟೀವ್ ಸಿಸ್ಟಮ್‍ಗಳನ್ನು ಅಳವಡಿಸಿದ್ದು, ಇಂದು ಲೋಕಾರ್ಪಣೆ ಮಾಡಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವ ಕೇಂದ್ರದ ಗ್ರಂಥಾಲಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉನ್ನತ ಶಿಕ್ಷಣಕ್ಕೆ ಪೂರಕವಾದಂತಹ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳನ್ನು ಕ್ಷಣದಲ್ಲಿ ಲಭ್ಯವಾಗುವಂತಹ ನಿಟ್ಟಿನಲ್ಲಿ ಗಣಕೀಕರಣಗೊಳಿಸಲಾಗಿದೆ.
ಎಸ್ಸಿ, ಎಸ್ಟಿ ಸಮುದಾಯದ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಝಿಮ್ ಸ್ಥಾಪನೆಗಾಗಿ ವಿಶೇಷ ಘಟಕ ಯೋಜನೆಯಡಿ 9 ಮಂದಿ ಕ್ರೀಡಾಪಟುಗಳಿಗೆ 27 ವಿವಿಧ ಬಗೆಯ ಝಿಮ್ ಉಪಕರಣಗಳನ್ನು ವಿತರಿಸಲಾಯಿತ್ತೆಂದು ಕ್ರೀಡಾ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
Next Story





