ನಿಮಗೆ ಕೊಟ್ಟು ಗೊತ್ತಿಲ್ಲ, ಕಿತ್ತುಕೊಳ್ಳುವುದಷ್ಟೇ ಗೊತ್ತು: ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಆ. 21: `ನಿಮಗೆ ಕೊಟ್ಟು ಗೊತ್ತಿಲ್ಲ, ಕಿತ್ತುಕೊಳ್ಳುವುದಷ್ಟೇ ಗೊತ್ತು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಶೇ.27ರಷ್ಟು ವಿದ್ಯಾರ್ಥಿಗಳ ಬಳಿ ಲ್ಯಾಪ್‍ಟಾಪ್ ಇಲ್ಲ. ಆನ್‍ಲೈನ್ ಶಿಕ್ಷಣ ಎಂದು ಕೊಚ್ಚಿಕೊಳ್ತಿರಿ. ಹೀಗಿದ್ದರೂ ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡುವ ಯೋಜನೆ ರದ್ದು ಮಾಡಿದ್ದೀರಿ. ನಿಮಗೆ ಕೊಟ್ಟು ಗೊತ್ತಿಲ್ಲ, ಕಿತ್ತುಕೊಳ್ಳುವುದಷ್ಟೇ ಗೊತ್ತು ಎಂದು ಟೀಕಿಸಿದ್ದಾರೆ.
ರಸಗೊಬ್ಬರ ಕೊರತೆ: ಸರಕಾರದ ವೈಫಲ್ಯ
ಮುಂಗಾರು ಆರಂಭವಾದಾಗಲೇ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನಿಗೆ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೆ. ನಿರೀಕ್ಷೆಯಂತೆಯೇ ರಾಜ್ಯ ಸರಕಾರದ ವೈಫಲ್ಯದ ಫಲವನ್ನು ರೈತರು ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ತಕ್ಷಣ ಗಮನಹರಿಸಿ ರಸಗೊಬ್ಬರ ಪೂರೈಕೆ ವ್ಯವಸ್ಥೆ ಮಾಡಬೇಕು'
-ಸಿದ್ದರಾಮಯ್ಯ, ವಿಪಕ್ಷ ನಾಯಕ







