ಉದ್ಯಾವರ: ವನಮಹೋತ್ಸವ -ಸದ್ಭಾವನಾ ದಿನಾಚರಣೆ

ಉಡುಪಿ, ಆ.21: ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ದ್ರವ್ಯಗುಣ ವಿಭಾಗ, ಮೂಲಿಕೋದ್ಯಾನ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ವನಮಹೋತ್ಸವ ಹಾಗೂ ಸದ್ಭಾವನಾ ದಿನಾಚರಣೆ ಆ.20ರಂದು ಜರಗಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಕಹಿಬೇವಿನ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ವಿದ್ಯಾಲಕ್ಷ್ಮೀ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಹ ಮುಖ್ಯಸ್ಥರಾದ ಡಾ.ನಾಗರಾಜ್ ಎಸ್., ಡಾ.ವೀರಕುಮಾರ ಕೆ., ದ್ರವ್ಯಗುಣ ವಿಭಾಗದ ಡಾ.ಮಹಮ್ಮದ್ ಫೈಸಲ್, ಡಾ.ನಿವೇದಿತಾ ಶೆಟ್ಟಿ, ಡಾ.ತೇಜಸ್ವಿ ನಾಯ್ಕಿ, ರಾಷ್ಟ್ರೀಯ ಸೇವಾ ಯೋಜನೆಯ ಡಾ.ಶ್ರೀನಿಧಿ ಧನ್ಯ, ಡಾ.ಶರಶ್ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ ಪಿ. ಸ್ವಾಗತಿಸಿದರು. ಮೂಲಿ ಕೋದ್ಯಾನ ಸಮಿತಿಯ ಮುಖ್ಯಸ್ಥೆ ಡಾ.ಸುಮಾ ಮಲ್ಯ ವಂದಿಸಿದರು. ಡಾ.ಚೈತ್ರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾಲೇಜಿನ ಔಷಧ ವನದ ವಿವಿಧ ಭಾಗಗಳಲ್ಲಿ 100ಕ್ಕೂ ಅಧಿಕ ಸಸ್ಯಗಳನ್ನು ನೆಡಲಾಯಿತು







