ಪ್ರತ್ಯೇಕ ಪ್ರಕರಣ : ಇಬ್ಬರ ಆತ್ಮಹತ್ಯೆ
ಕಾರ್ಕಳ, ಆ.21: ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾ ಗ್ರಾಮದ ಕೆರೆ ಮನೆ ನಿವಾಸಿ ಚಂದಯ್ಯ ಹೆಗ್ಡೆ(96) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆ.20ರಂದು ರಾತ್ರಿ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದ ಮಂಜುನಾಥ ಶೆಟ್ಟಿ (42) ಎಂಬವರು ಆ.20ರಂದು ಬೆಳಗ್ಗೆ ಮನೆ ಸಮೀಪದ ಚಿಂಗನಕೊಡು ಎಂಬಲ್ಲಿನ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





