Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಿಇಟಿ : ಟಾಪ್‍ಟೆನ್‍ನಲ್ಲಿ ಆಳ್ವಾಸ್‍ಗೆ...

ಸಿಇಟಿ : ಟಾಪ್‍ಟೆನ್‍ನಲ್ಲಿ ಆಳ್ವಾಸ್‍ಗೆ 5 ರ್ಯಾಂಕ್ : ಬಿಎನ್‍ವೈಎಸ್‍ನಲ್ಲಿ ಅರ್ನವ್ ಪ್ರಥಮ ರ್ಯಾಂಕ್

ವಾರ್ತಾಭಾರತಿವಾರ್ತಾಭಾರತಿ21 Aug 2020 10:58 PM IST
share
ಸಿಇಟಿ : ಟಾಪ್‍ಟೆನ್‍ನಲ್ಲಿ ಆಳ್ವಾಸ್‍ಗೆ 5 ರ್ಯಾಂಕ್ : ಬಿಎನ್‍ವೈಎಸ್‍ನಲ್ಲಿ ಅರ್ನವ್ ಪ್ರಥಮ ರ್ಯಾಂಕ್

ಮೂಡುಬಿದಿರೆ: ಸಿಇಟಿಯ ಆರು ವಿಭಾಗಗಳ ಪೈಕಿ ಐದರಲ್ಲಿ ಟಾಪ್ 10 ಸಾಲಿನಲ್ಲಿ ಆಳ್ವಾಸ್ ಪಿಯು ಕಾಲೇಜು ಐದು ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಆಳ್ವಾಸ್‍ನ ಅರ್ನವ್ ಅಯ್ಯಪ್ಪ ಒಟ್ಟು 180 ಅಂಕಗಳಲ್ಲಿ 174 ಅಂಕಗಳನ್ನು ಪಡೆದಿದ್ದು, ಮೆಡಿಕಲ್ ವಿಭಾಗದ ಬಿಎನ್‍ವೈಎಸ್‍ನಲ್ಲಿ ಪ್ರಥಮ ರ್ಯಾಂಕ್ ಅನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅರ್ನವ್ ಅವರು ಬಿ.ಎಸ್‍ಸಿ ಕೃಷಿ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್, ವೆಟರ್ನರಿ ಸೈನ್ ವಿಭಾಗದಲ್ಲಿ 5ನೇ ರ್ಯಾಂಕ್, ಬಿ ಫಾರ್ಮ್ ಹಾಗೂ ಡಿ ಫಾರ್ಮದಲ್ಲಿ ತಲಾ 7ನೇ ರ್ಯಾಂಕ್, ಎಂಜಿನಿಯರಿಂಗ್‍ನಲ್ಲಿ 81ನೇ ರ್ಯಾಂಕ್ ಪಡೆದಿದ್ದಾರೆ. 174 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಈತ ಜೀವಶಾಸ್ತ್ರ 60ರಲ್ಲಿ 60, ರಸಾಯನಶಾಸ್ತ್ರ 60ರಲ್ಲಿ 60 ಹಾಗೂ ಭೌತಶಾಸ್ತ್ರದಲ್ಲಿ 60ರಲ್ಲಿ 54 ಅಂಕಗಳನ್ನು ಪಡೆದಿದ್ದಾರೆ.

ಆಳ್ವಾಸ್‍ನ 21 ವಿದ್ಯಾರ್ಥಿಗಳಿಗೆ 150ಕ್ಕಿಂತ ಹೆಚ್ಚು ಅಂಕ

ಈ ಬಾರಿ ಸಿಇಟಿಯಲ್ಲಿ 160ರಿಂದ 170ರೊಳಗೆ 6 ಮಂದಿ, 150ರಿಂದ 160ರೊಳಗೆ 14 ಹೀಗೆ ಒಟ್ಟು 21 ಮಂದಿ 150 ಮೇಲೆ ಅಂಕಗಳನ್ನು ಗಳಿಸಿರುವುದು ಅಮೋಘ ಸಾಧನೆಯಾಗಿದೆ.654 ಮಂದಿ ವಿದ್ಯಾರ್ಥಿಗಳು 100 ಅಂಕಗಳಿಗೂ ಮೇಲ್ಪಟ್ಟ ಅಂಕ ಗಳಿಕೆಯ ಸಾಧನೆ ಮಾಡಿದ್ದಾರೆ.

ಆಳ್ವಾಸ್ ಸಿಇಟಿ ಸಾಧಕರು: ಅರ್ನವ್ ಅಯ್ಯಪ್ಪ -174 ಅಂಕಗಳು, ವರುಣ್ ತೇಜ್ -164, ಪಿ.ಎಸ್. ರವೀಂದ್ರ-164, ಅಭಿಷೇಕ್ ಸಂಗಪ್ಪ -164, ಅನಘಾ ತೆನಗಿ-163, ಅನಘ್ರ್ಯ ಕೆ.-163, ಬಸವೇಶ್ ಡಿ-160,ಖುಷಿ ಗೋಖಲೆ -160 
9. ಹರ್ಷ ವಿ-159, ದೀಪಕ್ ಬಾಬು ಪಿ-158, ಪೂಜಾ ಜಿ.ಎಸ್.-156, ಚಿನ್ಮಯಿ ಆರ್.-155, ಅನಿಲ್ ಬನ್ನಿಶೆಟ್ಟಿ-155, ಅವಿನಾಶ್ -154, ಚಂದು ಸೇನ್ ದಿವಾನ್ ಸಾಬ್ ಪೈಲ್ವಾನ್-154, ಜೈಪ್ರಕಾಶ್ ಜಿ.ಬಿ.- 152, ಗಾಯತ್ರೀ ಜೆ.ಎಸ್.-152, ಕಲ್ಪನಾ ಎ-151, ಜೀಯಪ್ಪ ರೆಡ್ಡಿ ಜಿ.ಎಸ್.-150, ಹೇಮಂತ್ ಎಂ.ಬಿ-150, ತೇಜಸ್ ಕೆ.ಕೆ- 150 ಅಂಕಗಳನ್ನು ಪಡೆದಿದ್ದಾರೆ.

50ರೊಳಗೆ 11 ಮಂದಿ 100ರೊಳಗೆ 27, 500ರೊಳಗೆ 134,1000ರೊಳಗೆ 325 ಮಂದಿ, 5 ಸಾವಿರದೊಳಗೆ 1311, 10 ಸಾವಿರದೊಳಗೆ 2343 ವಿದ್ಯಾರ್ಥಿಗಳು ರ್ಯಾಂಕ್‍ ಗಳಿಕೆಯ ಸಾಧನೆ ಮಾಡಿದ್ದಾರೆ. ಸಿಇಟಿಯಲ್ಲಿ ಆಳ್ವಾಸ್ ಸಾಧಕರ ದೊಡ್ಡ ಬ್ಯಾಚ್ ಕೊಡುಗೆಯನ್ನು ನೀಡುವ ತನ್ನ ಪರಂಪರೆಯಲ್ಲಿ ಈ ಬಾರಿಯದ್ದು ಅಮೋಘ ಸಾಧನೆಯಾಗಿದೆ ಎಂದು ಡಾ. ಆಳ್ವ ಸಂತಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಬಿಎನ್‍ವೈಎಸ್‍ನಲ್ಲಿ ಮೊದಲ ರ್ಯಾಂಕ್ ಪಡೆದ ಸಾದಕ ಅರ್ನವ್ ಅಯ್ಯಪ್ಪ ಅವರನ್ನು ಡಾ. ಆಳ್ವ ಅಭಿನಂಧಿಸಿದರು. 
ಪಿಯುಸಿ ಪ್ರಾಂಶುಪಾಲ ರಮೇಶ್ ಶೆಟ್ಟಿ, ಡೀನ್‍ಗಳಾದ ಮಹಮ್ಮದ ಸದಾಕತ್, ಚಂದ್ರಶೇಖರ್ ಅರಸ್,ಜಾನ್ಸಿ ಪಿಎನ್, ವಿಭಾಗ ಮುಖ್ಯಸ್ಥರು ಗಳಾದ ವೆಂಕಟೇಶ್ ನಾಯಕ್, ಯೋಗೀಶ್ ಬೇಡೇಕರ್, ವಿದ್ಯಾ ಸದಾಶಿವ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿ.ಆರ್.ಒ ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

ವೈದ್ಯನಾಗುವಾಸೆ: ಅರ್ನವ್ ಅಯ್ಯಪ್ಪ

ಕೊಡಗು ಮಡಿಕೇರಿಯ ವಕೀಲ ಪ್ರೀತಂ ಪಿ.ಯು- ಗೃಹಿಣಿ ಹೇಮಾ ಪಿ. ದಂಪತಿಯ ಪುತ್ರ ಅರ್ನವ್ ಅಯ್ಯಪ್ಪಗೆ ಮುಂದೆ ನೀಟ್ ಬರೆದು ವೈದ್ಯ ನಾಗುವ ಕನಸಿದೆ. ನಿತ್ಯ ಅಭ್ಯಾಸ ಅಗತ್ಯವಿದೆ. ಕಾಲೇಜಿನಲ್ಲಿ ಜೊತೆಗೆ ದಿನಕ್ಕೆ ಮೂರು ಗಂಟೆ ಹೆಚ್ಚುವರಿಯಾಗಿ ಸಿಇಟಿ ಓದಿಗೆ ಮೀಸಲಿಡುತ್ತಿದ್ದೆ. ಮುಂದೆ ನೀಟ್‍ನಲ್ಲೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಭವಿಷ್ಯದಲ್ಲಿ ನನ್ನ ಅಮ್ಮನ ಆಸೆಯಂತೆ ವೈದ್ಯೆನಾಗಬೇಕೆಂದಿದ್ದೇನೆ. ನಿರಂತರ ಓದು ಕೊರೋನದಿಂದ ಹಿನ್ನಡೆಯಾಗಿದೆ ಎನ್ನುವವರದ್ದು ಬರೇ ನೆಪ ಮಾತ್ರ. ಕೊಡಗಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.95, ಪಿಯುಸಿಯಲ್ಲೂ 
ಶೇ.98 ಪಡೆದಿದ್ದ ಅರ್ನವ್ ಈ ಸಾಧನೆಯ ಹಿನ್ನೆಲೆಯಲ್ಲಿ ಆಳ್ವಾಸ್ ಕೊಡುಗೆ ಮಹತ್ವದ್ದು ಎಂದರು.

''ಟಾಪ್ ಅಂಕಗಳನ್ನು ಪಡೆಯುವುದು ಮಾತ್ರವಲ್ಲ, ನಮ್ಮ ಸಂಸ್ಥೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪಾಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.''

-ಡಾ. ಎಂ ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X