Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಸಾಕ್ಷಿ, ಚಾನುಗೆ ಅರ್ಜುನ ಪ್ರಶಸ್ತಿ...

ಸಾಕ್ಷಿ, ಚಾನುಗೆ ಅರ್ಜುನ ಪ್ರಶಸ್ತಿ ನಿರಾಕರಿಸಿದ ಕ್ರೀಡಾ ಸಚಿವಾಲಯ

ವಾರ್ತಾಭಾರತಿವಾರ್ತಾಭಾರತಿ21 Aug 2020 11:30 PM IST
share
ಸಾಕ್ಷಿ, ಚಾನುಗೆ ಅರ್ಜುನ ಪ್ರಶಸ್ತಿ ನಿರಾಕರಿಸಿದ ಕ್ರೀಡಾ ಸಚಿವಾಲಯ

ಹೊಸದಿಲ್ಲಿ, ಆ.21: ರಾಜೀವ್ ಗಾಂಧಿ ಖೇಲ್ ರತ್ನ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಮೀರಾಬಾಯಿ ಚಾನು ಅವರಿಗೆ ಅರ್ಜುನ ಪ್ರಶಸ್ತಿ ನೀಡದಿರುವ ಬಗ್ಗೆ ಕ್ರೀಡಾ ಸಚಿವಾಲಯ ಶುಕ್ರವಾರ ನಿರ್ಧಾರ ಕೈಗೊಂಡಿದೆ.

   ಕ್ರೀಡಾ ಕ್ಷೇತ್ರದ ಅತ್ಯುನ್ನತ ಪುರಸ್ಕಾರ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಮಾಡಲಾಗಿರುವ ಐದು ಮಂದಿ ಕ್ರೀಡಾಪಟುಗಳ ಪಟ್ಟಿಯನ್ನು ಕ್ರೀಡಾ ಸಚಿವಾಲಯವು ಸ್ವೀಕರಿಸಿದೆ.

ಕಳೆದ ವಾರ ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಅರ್ಜುನ ಪ್ರಶಸ್ತಿಗೆ 29 ಹೆಸರುಗಳನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.ಈ ಪಟ್ಟಿಯಲ್ಲಿ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ಪಡೆದ ಮಹಿಳಾ ಕುಸ್ತಿಪಟು ಸಾಕ್ಷಿ ಮತ್ತು 2017ರ ವೇಟ್ ಲಿಫ್ಟಿಂಗ್ ವಿಶ್ವ ಚಾಂಪಿಯನ್ ಮೀರಾಬಾಯಿ ಹೆಸರು ಇತ್ತು. ಕ್ರೀಡಾ ಸಚಿವಾಲಯವು ಇವರ ಹೆಸರನ್ನು ಕೈ ಬಿಟ್ಟಿದ್ದರೂ, ಅಂತಿಮ ನಿರ್ಧಾರವನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ವಿವೇಚನೆಗೆ ಬಿಡಲಾಗಿದೆ. ಇದಕ್ಕೆ ಕಾರಣ ಅವರು ಈಗಾಗಲೇ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್‌ರತ್ನ ಪುರಸ್ಕಾರ ಪಡೆದಿರುವುದು. ಸಾಕ್ಷಿ 2016ರಲ್ಲಿ ಮತ್ತು ಚಾನು 2018ರಲ್ಲಿ ಖೇಲ್ ರತ್ನ ಪಡೆದಿದ್ದರು.

  ಈ ವರ್ಷದ ಖೇಲ್‌ರತ್ನ ಪ್ರಶಸ್ತಿಗೆ ಕ್ರಿಕೆಟಿಗ ರೋಹಿತ್ ಶರ್ಮಾ, ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಾಲಿಂಪಿಕ್‌ನಲ್ಲಿ ಚಿನ್ನ ಪಡೆದ ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಮತ್ತು ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರನ್ನು ಕ್ರೀಡಾ ಸಚಿವಾಲಯವು ಖೇಲ್‌ರತ್ನಕ್ಕೆ ಪರಿಗಣಿಸಿದೆ.

 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

  ರೋಹಿತ್ ಶರ್ಮಾ (ಕ್ರಿಕೆಟ್), ಮರಿಯಪ್ಪನ್ .ಟಿ. (ಪ್ಯಾರಾ ಅಥ್ಲೆಟಿಕ್ಸ್), ಮಣಿಕಾ ಬಾತ್ರಾ(ಟೇಬಲ್ ಟೆನಿಸ್), ವಿನೇಶ್ ಪೋಗಟ್ ( ಕುಸ್ತಿ), ರಾಣಿ ರಾಂಪಾಲ್ (ಹಾಕಿ)

  

 ದ್ರೋಣಾಚಾರ್ಯ ಪ್ರಶಸ್ತಿ (ಕೋಚ್‌ಗಳಿಗೆ -ಜೀವಮಾನ ಸಾಧನೆ): ಧರ್ಮೇಂದ್ರ ತಿವಾರಿ (ಆರ್ಚರಿ), ಪುರುಷೋತ್ತಮ್ ರೈ (ಅಥ್ಲೆಟಿಕ್ಸ್), ಶಿವ ಸಿಂಗ್ (ಬಾಕ್ಸಿಂಗ್), ರೋಮೇಶ್ ಪಥಾನಿಯಾ (ಹಾಕಿ), ಕ್ರಿಶನ್ ಕುಮಾರ್ ಹೂಡಾ (ಕಬಡ್ಡಿ), ವಿಜಯ್ ಬಾಲಚಂದ್ರ ಮುನಿಶ್ವರ್ (ಪ್ಯಾರಾ ಪವರ್ ಲಿಫ್ಟಿಂಗ್), ನರೇಶ್ ಕುಮಾರ್ (ಟೆನಿಸ್), ಓಂ ಪ್ರಕಾಶ್ ದಹಿಯಾ (ಕುಸ್ತಿ). ದ್ರೋಣಾಚಾರ್ಯ ಪ್ರಶಸ್ತಿ (ರೆಗ್ಯುಲರ್ ಕ್ಯಾಟಗೆರಿ): ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ (ಹಾಕಿ), ಯೋಗೇಶ್ ಮಾಲ್ವಿಯಾ (ಮಲ್ಲಕಂಭ), ಜಸ್ಪಾಲ್ ರಾಣಾ (ಶೂಟಿಂಗ್), ಕುಲದೀಪ್ ಕುಮಾರ್ ಹ್ಯಾಂಡೂ (ವುಶು), ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್).

   ಅರ್ಜುನ ಪ್ರಶಸ್ತಿ: ಅತನು ದಾಸ್ (ಆರ್ಚರಿ), ದ್ಯುತಿ ಚಂದ್ (ಅಥ್ಲೆಟಿಕ್ಸ್), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಬ್ಯಾಡ್ಮಿಂಟನ್), ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್), ವಿಶೇಶ್ ಭ್ರೀಗುವಾಂಶಿ (ಬಾಸ್ಕೆಟ್‌ಬಾಲ್), ಸುಬೇದಾರ್ ಮನೀಶ್ ಕೌಶಿಕ್ (ಬಾಕ್ಸಿಂಗ್), ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಇಶಾಂತ್ ಶರ್ಮಾ (ಕ್ರಿಕೆಟ್), ದೀಪ್ತಿ ಶರ್ಮಾ (ಕ್ರಿಕೆಟ್), ಸಾವಂತ್ ಅಜಯ್ ಅನಂತ್ (ಕುದುರೆ ಸವಾರಿ), ಸಂದೇಶ್ ಜಿಂಗನ್ (ಫುಟ್ಬಾಲ್), ಅದಿತಿ ಅಶೋಕ್ (ಗಾಲ್ಫ್), ಆಕಾಶ್‌ದೀಪ್ ಸಿಂಗ್ (ಹಾಕಿ), ದೀಪಿಕಾ (ಹಾಕಿ), ದೀಪಕ್ (ಕಬಡ್ಡಿ), ಕಲಾ ಸಾರಿಕಾ ಸುಧಾಕರ್ (ಖೋ ಖೋ), ದತ್ತ ಬಾಬನ್ ಭೋಕನಲ್ (ರೋಯಿಂಗ್), ಮನು ಭಾಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮಾಧುರಿಕಾ ಸುಹಾಸ್ ಪಾಠ್ಕರ್( ಟೇಬಲ್ ಟೆನಿಸ್), ದಿವಿಜ್ ಶರಣ್( ಟೆನಿಸ್), ಶಿವ ಕೇಶವನ್ (ವಿಂಟರ್ ಸ್ಪೋರ್ಟ್ಸ್), ದಿವ್ಯಾ ಕಕ್ರನ್( ಕುಸ್ತಿ), ರಾಹುಲ್ ಅವೇರ್ (ಕುಸ್ತಿ), ಸುಯಾಶ್ ನಾರಾಯಣ್ ಜಾಧವ್ (ಪ್ಯಾರಾ ಈಜು), ಸಂದೀಪ್ (ಪ್ಯಾರಾ ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X