3ನೇ ಟೆಸ್ಟ್: ಇಂಗ್ಲೆಂಡ್‌ನ ಕ್ರಾವ್ಲಿ ಚೊಚ್ಚಲ ಶತಕ

ಸೌಥಾಂಪ್ಟನ್, ಆ.21: ಪಾಕಿಸ್ತಾನ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಯುವ ಆಟಗಾರ ಝಕ್ ಕ್ರಾವ್ಲಿ ಚೊಚ್ಚಲ ಶತಕ ದಾಖಲಿಸಿದ್ದಾರೆ.
ಟೆಸ್ಟ್‌ನ ಮೊದಲ ದಿನವಾಗಿರುವ ಶುಕ್ರವಾರ ಕ್ರಾವ್ಲಿ ಶತಕದ ನೆರವಿನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 239 ರನ್ ಗಳಿಸಿದೆ.
ಟಾಸ್ ಜಯಿಸಿದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಯಾಸೀರ್ ಶಾ (83ಕ್ಕೆ2), ಶಾಹೀನ್ ಅಫ್ರಿದಿ(43ಕ್ಕೆ 1) ಮತ್ತು ನಸೀಮ್ ಶಾ(59ಕ್ಕೆ 1) ದಾಳಿಗೆ ಸಿಲುಕಿದ ಇಂಗ್ಲೆಂಡ್‌ನ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳಾದ ರಾರಿ ಬರ್ನ್ಸ್ (6), ಡೊಮಿನಿಕ್ ಸಿಬ್ಲೇ (22), ನಾಯಕ ಜೋ ರೂಟ್(2) ಮತ್ತು ಜೋಸ್ ಬಟ್ಲರ್(3) ಬೇಗನೆ ಔಟಾದರು. ಕ್ರಾವ್ಲಿ ಮತ್ತು ವೋಕ್ಸ್ ತಂಡಕ್ಕೆ ಆಸರೆ ನೀಡಿದರು. ವೋಕ್ಸ್ ಅರ್ಧಶತಕ (50) ಮತ್ತು ಕ್ರಾವ್ಲಿ 126 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.
Next Story





