ಸುರಪುರ: ವಿದ್ಯುತ್ ತಂತಿ ತಗಲಿ ವ್ಯಕ್ತಿ ಸಾವು

ಸುರಪುರ: ತಾಲೂಕಿನ ರತ್ತಾಳ ಗ್ರಾಮದಲ್ಲಿ ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
ಹೊನ್ನಕೆರಪ್ಪಾ ಮಲ್ಲಪ್ಪ ಗಡ್ಡದರ್ (28) ಮೃತ ವ್ಯಕ್ತಿ. ಇವರು ತಮ್ಮ ಹೊಲದಲ್ಲಿ ಕೊಳವೆ ಬಾವಿಗೆ ಅಳವಡಿಸಲಾದ ಪಂಪ್‌ಸೆಟ್‌ಗೆ ಹಾಕಲಾದ ವಿದ್ಯುತ್ ತಂತಿಯನ್ನು ಕಟ್ಟಿಗೆಯಿಂದ ಮೇಲಕ್ಕೆ ಎತ್ತಿ ಹಾಕುತ್ತಿರುವಾಗ ವಿದ್ಯುತ್ ತಂತಿ ತುಂಡಾಗಿ ಮೇಲೆ ಬಿದ್ದಿದ್ದು, ಇದರಿಂದ ಶಾಕ್ ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ ಹಳಿಚಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





