ಡೋಲ್ಫಿ ಮಾರ್ಟಿಸ್ ಕೆಮ್ಮಣ್ಣು

ಮುಂಬಯಿ, ಆ.23: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್‌ಮೆಂಟ್ ನಿವಾಸಿ ಡೋಲ್ಫಿ ಮಾರ್ಟಿಸ್ (60) ಹೃದಯಾಘಾತದಿಂದ ರವಿವಾರ ಮುಂಜಾನೆ ನಿಧನರಾದರು.
ಮೂಲತಃ ಉಡುಪಿ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕಂಬಳತೋಟ ನಿವಾಸಿಯಾಗಿದ್ದ ಡೋಲ್ಫಿ ಮಾರ್ಟಿಸ್ ಮುಂಬೈಯ ಹೆಸರಾಂತ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ದೀರ್ಘಾವಧಿಯಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಓರ್ವ ಪುತ್ರ ಸೇರಿದಂತೆ ಬಂಧು ಬಳಗ ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಆ.24ರಂದು ಚಕಲಾದ ಹೋಲಿ ಫ್ಯಾಮಿಲಿ ಇಗರ್ಜಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
Next Story





