ಪುತ್ತೂರಿನಲ್ಲಿ ಮತ್ತೆ ಐದು ಕೊರೋನ ಪಾಸಿಟಿವ್ ದೃಢ

ಪುತ್ತೂರು, ಆ.23: ಪುತ್ತೂರು ತಾಲೂಕಿನಲ್ಲಿ ರವಿವಾರ 5 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಆದರೆ ಕಡಬ ತಾಲೂಕಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.
ಪುತ್ತೂರು ತಾಲೂಕಿನ ಕುರಿಯ ನಿವಾಸಿ 35 ವರ್ಷದ ಮಹಿಳೆ, ಉಪ್ಪಿನಂಗಡಿ ನಿವಾಸಿ 66 ವರ್ಷದ ಮಹಿಳೆ, ಸರ್ವೆ ನಿವಾಸಿ 39 ವರ್ಷದ ಮಹಿಳೆ, ಕೆಮ್ಮಿಂಜೆ ನಿವಾಸಿ 26 ವರ್ಷದ ಮಹಿಳೆ ಮತ್ತು ದರ್ಬೆ ನಿವಾಸಿ 45 ವರ್ಷದ ಪುರುಷರೊಬ್ಬರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯ ಇಲಾಖೆ ತಿಳಿಸಿದೆ.
ಇದರೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಈ ತನಕ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 564ಕ್ಕೆ ಏರಿಕೆಯಾಗಿದೆ.
Next Story





