ತಮ್ಮ ನಿವಾಸದಲ್ಲಿ ನವಿಲುಗಳೊಂದಿಗಿದ್ದ ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ

ಹೊಸದಿಲ್ಲಿ, ಆ.23: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ನವಿಲುಗಳೊಂದಿಗಿನ ಬಂಧದ ಸುಂದರ ವೀಡಿಯೊವೊಂದನ್ನು ಹಂಚಿಕೊಳ್ಳುವುದರೊಂದಿಗೆ ಸಾಮಾಜಿಕ ಮಾಧ್ಯಮದ ತನ್ನ ಅನುಯಾಯಿಗಳನ್ನು ರಂಜಿಸಿದರು.
1.47 ನಿಮಿಷಗಳ ವೀಡಿಯೊವನ್ನು ಟ್ವಿಟರ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಪ್ರಧಾನಮಂತ್ರಿ ತಮ್ಮಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ನವಿಲುಗಳೊಂದಿಗೆ ಸಮಯ ಕಳೆಯುವ ಕೆಲವು ನೋಟಗಳಿವೆ.ಸುಂದರವಾದ ಹಿಂದಿಯ ಕವಿತೆಯ ಜೊತೆಗೆ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.
ನವಿಲುಗಳನ್ನು ಪ್ರಧಾನಮಂತ್ರಿಯ ನಿವಾಸದಲ್ಲಿ ಸಾಮಾನ್ಯ ಒಡನಾಡಿಯಾಗಿ ನೋಡಲಾಗುತ್ತದೆ. ಕೆಲವು ದೃಶ್ಯದಲ್ಲಿ ಪ್ರಧಾನಿ ನವಿಲುಗಳಿಗೆ ಆಹಾರ ತಿನ್ನಿಸುತ್ತಿರುವುದು, ಪ್ರಧಾನಿಯವರು ಸೊಂಪಾದ ಹಸಿರಿನಿಂದ ಕೂಡಿದ ತಮ್ಮ ನಿವಾಸದ ಸುತ್ತಮುತ್ತ ಬೆಳಗ್ಗಿನ ವಾಡಿಕೆಯ ವ್ಯಾಯಾಮ ನಿರ್ವಹಿಸುತ್ತಿರುವಾಗ ನವಿಲುಗಳು ಗರಿಬಿಚ್ಚಿ ನೃತ್ಯಗೈಯುತ್ತಿರುವುದನ್ನು ಕಾಣಬಹುದು.
भोर भयो, बिन शोर,
— Narendra Modi (@narendramodi) August 23, 2020
मन मोर, भयो विभोर,
रग-रग है रंगा, नीला भूरा श्याम सुहाना,
मनमोहक, मोर निराला।
रंग है, पर राग नहीं,
विराग का विश्वास यही,
न चाह, न वाह, न आह,
गूँजे घर-घर आज भी गान,
जिये तो मुरली के साथ
जाये तो मुरलीधर के ताज। pic.twitter.com/Dm0Ie9bMvF







