ಸ್ವರಾ ಭಾಸ್ಕರ್ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಬೇಕು ಎಂದ ಅರ್ಜಿ ತಿರಸ್ಕರಿಸಿದ ಅಟಾರ್ನಿ ಜನರಲ್

ಹೊಸದಿಲ್ಲಿ: ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ನೀಡಿದ ಹೇಳಿಕೆಗಾಗಿ ನಟಿ ಸ್ವರಾ ಭಾಸ್ಕರ್ ವಿರುದ್ಧ ಕ್ರಿಮಿನಲ್ ನಿಂದನೆ ವಿಚಾರಣೆ ಆರಂಭಿಸಬೇಕು ಎನ್ನುವ ಅರ್ಜಿಯನ್ನು ಅಟಾರ್ನಿ ಜನರಲ್ ತಿರಸ್ಕರಿಸಿದ್ದಾರೆ.
ಸ್ವರಾ ಅವರ ಹೇಳಿಕೆಯು ‘ಅವಮಾನಕಾರಿ’, ಮತ್ತು ‘ಕೋರ್ಟ್ ಮೇಲಿನ ದಾಳಿ’ ಎಂದು ಅರ್ಜಿದಾರರು ಆರೋಪಿಸಿದ್ದರು.
ಆದರೆ ಹೇಳಿಕೆಯು ಅವರ ದೃಷ್ಟಿಕೋನ ಮಾತ್ರವಾಗಿದೆ ಮತ್ತು ಅದು ಸುಪ್ರೀಂ ಕೋರ್ಟ್ ಬಗ್ಗೆ ನೀಡಿದ ಹೇಳಿಕೆಯಲ್ಲ ಅಥವಾ ಸುಪ್ರೀಂ ಕೋರ್ಟನ್ನು ಅವಮಾನಿಸುವ ಹೇಳಿಕೆ ನೀಡಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ.
Next Story





