ಯುನಿವೆಫ್ ನಿಂದ ಕೋವಿಡ್ 19 ತರಬೇತಿ ಶಿಬಿರ

ಮಂಗಳೂರು : ಯುನಿವೆಫ್ ಕರ್ನಾಟಕದ ಸಮಾಜ ಸೇವಾ ಫೋರಂ -"ಅಭಯ"ದ ಆಶ್ರಯದಲ್ಲಿ ಏಕದಿನ ಕೋವಿಡ್ 19 ತರಬೇತಿ ಶಿಬಿರವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ರವಿವಾರ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ನವೀನ್ ಕುಮಾರ್ ಕೋವಿಡ್ 19 ಕುರಿತ ಸಮಗ್ರ ಮಾಹಿತಿಯನ್ನು ನೀಡಿದರು. ಕೊರೋನ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಎಚ್ಚರ ವಹಿಸಿದರೆ ಸಾಕು. ರೋಗ ಬಾಧಿತರಾದಾಗ ಭಯ ಪಡದೆ ಶೀಘ್ರ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದರು. ಅಲ್ಲದೆ ಕೋವಿಡ್ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳ ಸೌಲಭ್ಯ, ಆಯುಷ್ಮಾನ್ ಕಾರ್ಡ್ ಮುಂತಾದುವುಗಳ ಬಗ್ಗೆ ವಿವರಿಸಿದರು.
ಇನ್ನೋರ್ವ ಅತಿಥಿ ವೈದ್ಯಾಧಿಕಾರಿ ಡಾ. ಮುಹಮ್ಮದ್ ಅಶ್ಫಾಖ್ ಅವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸರಳ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಖ್ಯಾತ ಮನಶಾಸ್ತ್ರಜ್ಞ ಮತ್ತು ಸಮಾಲೋಚಕ ಡಾ. ಸರ್ಫ್ರಾಝ್ ಹಾಶಿಮ್ ಮಾತನಾಡಿದರು. ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅತೀಕುರ್‍ರಹ್ಮಾನ್ ಕಿರ್'ಅತ್ ಪಠಿಸಿದರು. ಕಾರ್ಯದರ್ಶಿ ಯು. ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸೈಫುದ್ದೀನ್, ಜಿಲ್ಲಾಧ್ಯಕ್ಷ ನೌಫಲ್ ಹಸನ್ ಮತ್ತು ಕುದ್ರೋಳಿ ಶಾಖಾಧ್ಯಕ್ಷ ಅರ್ಶಲನ್ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಹಸಂಚಾಲಕ ಹುಝೈಫ್ ಕುದ್ರೋಳಿ ಉಪಸ್ಥಿತರಿದ್ದರು.










