ಮಾನಸಿಕ ಕಿರುಕುಳ ಆರೋಪ: ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದ ವೈದ್ಯರು

ಬೆಂಗಳೂರು, ಆ. 23: ಬಿಬಿಎಂಪಿಯ ಯಲಹಂಕ ಜಂಟಿ ಆಯುಕ್ತ ಅಶೋಕ್ ಅವರು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ ವೈದ್ಯರು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಯಲಹಂಕ ಜಂಟಿ ಆಯುಕ್ತ ಅಶೋಕ್ ಅವರು ತಮ್ಮನ್ನು ಸಭೆಯ ವೇಳೆ ಬಾಯಿಗೆ ಬಂದಂತೆ ನಿಂದಿಸುತ್ತಾರೆ. ಇದರಿಂದ ನಾವು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಹೀಗಾಗಿ, ಕೂಡಲೇ ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಹಾಯಕರು ಬಿಬಿಎಂಪಿ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
Next Story





