ದಾರುಲ್ ಮುಸ್ತಫ ನಚ್ಚಬೆಟ್ಟು: ಉಳ್ಳಾಲ ಘಟಕದ ಮಹಾಸಭೆ, ನೂತನ ಸಮಿತಿ ರಚನೆ

ಉಳ್ಳಾಲ: ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ನಚ್ಚಬೆಟ್ಟು ಉಳ್ಳಾಲ ಘಟಕ ಇದರ ಮಹಾಸಭೆ ಸಂಸ್ಥೆಯ ಸಂಸ್ಥಾಪಕರಾದ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ನೇತೃತ್ವದಲ್ಲಿ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸೆಂಟರಿನಲ್ಲಿ ನಡೆಯಿತು.
ತಲಪಾಡಿ ಮಸೀದಿಯ ಖತೀಬ್ ಜಾಬಿರ್ ಫಾಳಿಲಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಸಂಸ್ಥೆಯ ಬೆಳವಣಿಗೆಯ ಕುರಿತು ಮಾಹಿತಿ ವಿನಿಮಯ ಮಾಡಿದರು.
ಬಳಿಕ ತೋಕೆ ಉಸ್ತಾದರ ನೇತೃತ್ವದಲ್ಲಿ ಸಂಸ್ಥೆಯ ಉಳ್ಳಾಲ ಘಟಕ ಇದರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಕಾರ್ಯಾಧ್ಯಕ್ಷರಾಗಿ ಇಸಾಕ್ ಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಮುಕ್ಕಚ್ಚೇರಿ, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಉಪಾಧ್ಯಕ್ಷರುಗಳಾಗಿ ಫಾರೂಕ್ ಅಬ್ಬಾಸ್ ಹಾಜಿ ಕೋಟೆಪುರ ಹಾಗು ಇಲ್ಯಾಸ್ ಕೈಕೋ, ಜೊತೆ ಕಾರ್ಯದರ್ಶಿಗಳಾಗಿ ಮುಝಮ್ಮಿಲ್ ಕೋಟೆಪುರ, ಮುಹಮ್ಮದ್ ಕೈಕೋ, ಹಮೀದ್ ಹಳೆಕೋಟೆ, ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಉಳ್ಳಾಲ, ವರ್ಕಿಂಗ್ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮದನಿ ಕೋಟೆಪುರ ಇವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ 39 ಮಂದಿಯನ್ನು ಆಯ್ಕೆ ಮಾಡಲಾಯಿತು.







