ರಕ್ಷಾ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ಕಾಪು ತಹಶೀಲ್ದಾರಿಗೆ ಮನವಿ

ಕಾಪು: ಕಾಪು ಮೂಲದ ರಕ್ಷಾ ಅವರ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರಗಿಸಲು ಆಗ್ರಹಿಸಿ ಸೋಮವಾರ ಕಾಪು ತಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ತುಳುನಾಡ ಹಿಂದೂ ಸೇನೆ, ಸಮಾನ ಮನಸ್ಕರು ಹಾಗೂ ಕಾಪು ನಾಗರಿಕರಿಂದ ಉಡುಪಿ ಜಿಲ್ಲಾಧಿಕಾರಿಯವರಿಗೆ ಕಾಪು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಹಾಗೂ ಎಸ್‍ಪಿ ಅವರಿಗೆ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಪರವಾಗಿ ಉಪತಹಶೀಲ್ದಾರ್ ಚಂದ್ರಶೇಖರ್ ಮನವಿ ಸ್ವೀಕರಿಸಿದರು.
ತುಳುನಾಡ ಹಿಂದೂ ಸೇನೆ ಕಾರ್ಯದರ್ಶಿ ಯಾದವ್ ಪೂಜಾರಿ, ನಿತಿನ್ ಕೋಟ್ಯಾನ್, ಸಚಿನ್ ಶೆಟ್ಟಿ ನಡಿಕೆರೆ, ಪ್ರಥ್ವಿ ಸಹೋದರ, ರವಿ ಬಿಂದಾಸ್ ಹಾಗೂ ನಾಗರಿಕರು ಉಪಸ್ಥಿತರಿದ್ದರು.
Next Story





